ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಪುನರ್ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ “ಮನವಿ ಪತ್ರ” ಬಿಡುಗಡೆ

ಕಲ್ಮಡ್ಕ : ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಸಭಾಭವನದಲ್ಲಿ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಪುನರ್ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕುರಿತು “ಮನವಿ ಪತ್ರ”ವನ್ನು 01 ಅಕ್ಟೋಬರ್ 2026 ರಂದು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಉದಯ್ ಕುಮಾರ್ ಬೆಟ್ಟ ರವರು ಬಿಡುಗಡೆ ಮಾಡಿದರು.

. . . . . . . . .

ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 50ಲಕ್ಷದಷ್ಟು ಖರ್ಚು ತಗಲುವ ಕುರಿತು ಹಾಗೂ ದೈವಸ್ಥಾನದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಕ್ಷೇತ್ರದ ಮೊಕ್ತೇಸರರು ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಎಡಪತ್ಯ ರವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಶಾಂತ್ ಜೋಗಿಬೆಟ್ಟು, ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲೋಕಯ್ಯ ನಾಯ್ಕ ಬೊಳಿಯೂರು ,ಉಪಾಧ್ಯಕ್ಷರಾದ ಓಬಯ್ಯ ನಾಯ್ಕ ಮಾಳಪ್ಪಮಕ್ಕಿ, ಬಾಲಪ್ಪ ನಾಯ್ಕ ಕಾಚಿಲ, ಕಾರ್ಯದರ್ಶಿ ಸಚಿತ್ ಪೆರಿಯಪ್ಪು ಹಾಗೂ ಜೀರ್ಣೋದ್ಧಾರ ಸಮಿತಿ ಸಂಚಾಲಕರಾದ ಜಗದೀಶ್ ಮಠ ಹಾಗೂ ಮಹಿಳಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಭವಾನಿ ಬೊಮ್ಮಟ್ಟಿ , ಉಪಾಧ್ಯಕ್ಷರಾದ ಶ್ರೀಮತಿ ವೇದಾವತಿ ಮಾಳಪ್ಪಮಕ್ಕಿ ಹಾಗೂ ಸೇವಾ ಸಮಿತಿ ಪದಾಧಿಕಾರಿ, ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ತಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading