ಇಂದಿನಿಂದ(ಅ.02 ರಿಂದ 04) ಸುಳ್ಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ “ಸ್ವದೇಶಿ ಆಹಾರ ಮೇಳ” ; ಸ್ವದೇಶಿ ಆಹಾರದ ಸವಿಯೊಂದಿಗೆ ಸ್ವದೇಶಿ ಸೊಗಡಿನ ಸಂಭ್ರಮ

ಸುಳ್ಯದಲ್ಲಿ ಇದೇ ಮೊದಲ ಬಾರಿಗೆ “ಸ್ವದೇಶಿ ಆಹಾರ ಮೇಳ”ವು ಇಂದಿನಿಂದ(ಅ.02) ಅ.04 ರವರೆಗೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಹಾಗೂ ಶಕ್ತಿ ಇವೆಂಟ್ಸ್ ಇದರ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ವಿವಿಧ ತಿಂಡಿ-ತಿನಿಸುಗಳು, ಖಾದಿ ಬಟ್ಟೆಗಳು, ಮಸಾಲಾ ಪದಾರ್ಥಗಳು, ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಮತ್ತು ಹಳೆಯ ಸೀರೆಗಳ ಖರೀದಿ ಮಳಿಗೆಗಳು ಇರಲಿದ್ದು, ಸ್ವದೇಶಿ ಆಹಾರದ ಸವಿಯೊಂದಿಗೆ ಸ್ವದೇಶಿ ಸೊಗಡಿನ ಸಂಭ್ರಮದೊಂದಿಗೆ ನಡೆಯಲಿರುವ ಈ ಆಹಾರ ಮೇಳಕ್ಕೆ ಸುಳ್ಯ ತಾಲೂಕಿನ ಜನತೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading