ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ವೈದಿಕ ಪ್ರಶಸ್ತಿ ಪುರಸ್ಕಾರ ಸಮಾರಂಭ

ಬೆಳ್ಳಾರೆ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ರಿ. ಮಂಗಳೂರು ಇದರ ವತಿಯಿಂದ, ಚೂಂತಾರು ಉಪಾಸನಾ ನಿಲಯದಲ್ಲಿ, ಬಂಧು ಮಿತ್ರರ ಸಮ್ಮುಖದಲ್ಲಿ, ಪ್ರತೀ ವರ್ಷ ಇಬ್ಬರು ವ್ಯಕ್ತಿಗಳಿಗೆ ನೀಡಲ್ಪಡುವ, 2026ನೆ ಸಾಲಿನ, ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ವೈದಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು. 

. . . . . . . . .

ಈ ವರ್ಷದ ಪುರಸ್ಕಾರಕ್ಕೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ, ವೈದಿಕ ಸಹಾಯಕ ವೃತ್ತಿಯ ಮೂಲಕ, ಸನಾತನ ಸಂಸ್ಕೃತಿ, ಸಂಸ್ಕಾರ ಪ್ರಸಾರದಲ್ಲಿ, ಆಚರಣೆಗಳಲ್ಲಿ ತೊಡಗಿಕೊಂಡಿರುವ ಅಯ್ಯನಕಟ್ಟೆ ಸಮೀಪದ ಪಂಜಿಗಾರಿನ ಶಿವಶಂಕರ ಭಟ್ ಹಿರಣ್ಯ ಇವರಿಗೆ ನೀಡಿ ಗೌರವಿಸಲಾಯಿತು. 

. . . . . . .

ಇವರೊಂದಿಗೆ ದೇಸೀ ಗೋತಳಿ ಸಂರಕ್ಷಕ ಮತ್ತು ನಿಸರ್ಗ ಸಹಜವಾಗಿ ಅಂದರೆ ಹಸುಗಳನ್ನು ಇಪ್ಪತ್ತನಾಲ್ಕು ಗಂಟೆಯೂ ಕಟ್ಟಿ ಹಾಕದೆ ಬಿಟ್ಟು ಸಾಕಾಣಿಕೆ ಮಾಡುತ್ತಿರುವ ಹಾಗೂ ಆ ಮೂಲಕ ಸಾವಯವ ಗೊಬ್ಬರ ತಯಾರಿ, ಗೋ ಅರ್ಕದಿಂದ ಉಪ ಉತ್ಪನ್ನವಾಗಿ ದ್ರವ ರೂಪದ ಸಾಬೂನು ತಯಾರಿ, ಅಂಬಾ ವಾಹನ ಕ್ಲೀನರ್ ಮತ್ತು ಅಂಬಾ ಶುಭ್ರ ಶೌಚಾಲಯ ಕ್ಲೀನರ್ ತಯಾರಕರಾಗಿರುವ ಇನ್ನೋರ್ವ ಸಾಧಕರಾದ ಚೊಕ್ಕಾಡಿಯ ಅಕ್ಕೋಜಿಪಾಲಿನ, ಜೋಗಿಯಡ್ಕ ಮಹಾಲಿಂಗೇಶ್ವರ ಭಟ್ಟ ಇವರಿಗೆ ವೈದಿಕ ಸಾಧಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇವರೊಂದಿಗೆ ಶೈಕ್ಷಣಿಕವಾಗಿ ವಿಶೇಷ ಸಾಧನೆ ಮಾಡಿರುವ, ಚೂಂತಾರು ಮನೆತನದ ಶಿವಪ್ರಸಾದ ಭಟ್ಟರ ಪುತ್ರ ಸ್ಕಂದ ಕೃಷ್ಣ ಇವರು, ಅಖಿಲ ಭಾರತೀಯ ಮಟ್ಟದಲ್ಲಿ ಜರಗುವ ಲೆಕ್ಕ ಪರಿಶೋಧಕ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದು ಉತ್ತೀರ್ಣರಾಗಿದ್ದು, ಇವರ ಸಾಧನೆಯನ್ನು ಗುರುತಿಸಿ, ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.  

ಪುರಸ್ಕಾರ ಮತ್ತು ಪ್ರಶಸ್ತಿ ಪ್ರದಾನವನ್ನು ಊರಿನ ಹಿರಿಯರಾದ ಆನೇಕಾರ ಗಣಪಯ್ಯ, ಗುರಿಕ್ಕಾರರಾದ ಜಯರಾಮ ಪೋನಡ್ಕ, ಸತ್ಯವೆಂಕಟೇಶ್ವರ ಹೆಬ್ಬಾರ್ ಶೇಣಿ ಮತ್ತು ಶ್ರೀಮತಿ ನಳಿನಿ ಎಸ್ ರಾವ್ ಪೈಲೂರು ಇವರು ಪೀಠ ತೊಡಿಸಿ, ಶಾಲು ಮಾಲೆ ಫಲಪುಷ್ಪ ಮತ್ತು ಗೌರವ ಧನವನ್ನು ಸಮರ್ಪಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿವಶಂಕರ ಭಟ್ಟರವರ ಪತ್ನಿ ಶ್ರೀಮತಿ ಕೃಷ್ಣವೇಣಿಯವರು ಉಪಸ್ಥಿತರಿದ್ದರು.

 ಸನ್ಮಾನ ಪತ್ರವನ್ನು ಪ್ರತಿಷ್ಠಾನದ ಸದಸ್ಯರಾದ ಗೀತಾದೇವಿ ಕುರಿಯ, ಸ್ನೇಹ ಹೆಬ್ಬಾರ್ ಶಿವಮೊಗ್ಗ, ಸುರಭಿ ಚೂಂತಾರು ಇವರು ವಾಚಿಸಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಇನ್ನೋರ್ವ ಸದಸ್ಯರಾದ ಗಣೇಶ್ ಸುಂದರ್ ಕುರಿಯ ಮತ್ತು ಗಂಗಾ ಮಹೇಶ್ ಉಪಸ್ಥಿತರಿದ್ದರು. 

ಚೂಂತಾರು ಮಹೇಶ್ ಭಟ್ ಮತ್ತು ಡಾ. ಮುರಲೀಮೋಹನ ಚೂಂತಾರು ಸ್ವಾಗತಿಸಿ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೂಂತಾರು ಕಾರ್ಯಕ್ರಮವನ್ನು ಸಂಯೋಜಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading