ಕಸ್ತೂರಿರಂಗನ್ ವರದಿಗೆ ಬಿಳಿನೆಲೆ ಗ್ರಾಮಸ್ಥರ ಒಕ್ಕೊರಲಿನ ವಿರೋಧ – “ESA–ESZ ಜಾರಿ ಬೇಡ ; ಗ್ರಾಮಸ್ಥರ ಹಕ್ಕು ಮತ್ತು ಜೀವನೋಪಾಯಕ್ಕೆ ಧಕ್ಕೆ ತರುವ ಯಾವುದೇ ನಿರ್ಬಂಧ ಒಪ್ಪುವುದಿಲ್ಲ”

ಬಿಳಿನೆಲೆ, ಸೆ. 24 : ಕಸ್ತೂರಿರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ESA) ಹಾಗೂ ESZ ವ್ಯಾಪ್ತಿಯನ್ನು ಜಾರಿಗೊಳಿಸುವುದಕ್ಕೆ ಬಿಳಿನೆಲೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಳಿನೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ಈ ಕುರಿತು ಗ್ರಾಮಸ್ಥರು ಒಕ್ಕೊರಲಿನಿಂದ ವಿರೋಧ ನಿರ್ಣಯ ಕೈಗೊಂಡರು.

. . . . . . . . .

ಕಸ್ತೂರಿರಂಗನ್ ವರದಿ ಜಾರಿಯಾದಲ್ಲಿ ಗ್ರಾಮದ ಕೃಷಿ, ಜಮೀನು, ಮನೆ ನಿರ್ಮಾಣ ಹಾಗೂ ದುರಸ್ತಿ ಸೇರಿದಂತೆ ಗ್ರಾಮಸ್ಥರ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧಗಳು ಎದುರಾಗುವ ಆತಂಕವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ತಮ್ಮ ಜಮೀನು ಮತ್ತು ಜೀವನೋಪಾಯದ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರುವ ಪ್ರಸ್ತಾವನೆಯನ್ನು ಗ್ರಾಮಸ್ಥರು ಒಪ್ಪುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.

. . . . . . .

ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಸ್ತೂರಿರಂಗನ್ ವರದಿ ಆಧಾರಿತ ESA/ESZ ವ್ಯಾಪ್ತಿಗೆ ಬಿಳಿನೆಲೆ ಗ್ರಾಮವನ್ನು ಒಳಪಡಿಸುವುದನ್ನು ಸಂಪೂರ್ಣವಾಗಿ ವಿರೋಧಿಸುವುದಾಗಿ ಒಕ್ಕೊರಲಿನಿಂದ ನಿರ್ಣಯಿಸಿದರು.

ಸಭೆಯಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಚಲುವರಂಗಪ್ಪ, ಸುಬ್ರಹ್ಮಣ್ಯ ಆರ್‌ಎಫ್‌ಒ ಚೇತನ್, ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಉಪಸ್ಥಿತರಿದ್ದರು.

ಗ್ರಾಮಸ್ಥರ ಪರವಾಗಿ ಮಂಡಿಸಲಾದ ನಿರ್ಣಯದಲ್ಲಿ, ಕಸ್ತೂರಿರಂಗನ್ ವರದಿ ಆಧಾರಿತ ESA/ESZ ನಿಯಮಗಳನ್ನು ಬಿಳಿನೆಲೆ ಗ್ರಾಮದಲ್ಲಿ ಜಾರಿಗೊಳಿಸಬಾರದು. ಗ್ರಾಮಸ್ಥರ ಜಮೀನು, ಕೃಷಿ, ಮನೆ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಬಂಧಗಳನ್ನು ಹೇರಬಾರದು ಎಂದು ಒತ್ತಾಯಿಸಲಾಯಿತು.

ಗ್ರಾಮಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಸಲ್ಲಿಸಿ, ಬಿಳಿನೆಲೆ ಗ್ರಾಮವನ್ನು ಕಸ್ತೂರಿರಂಗನ್ ವರದಿ ಆಧಾರಿತ ESA/ESZ ವ್ಯಾಪ್ತಿಯಿಂದ ಹೊರಗಿಡುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading