ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಬಲೀಂದ್ರ ಮರ ಪ್ರತಿಷ್ಠಾಪನೆ, ಬಲಿಪೂಜೆ ಸಂಪನ್ನ ; ನಾಳೆ(ನ.10) ದೈವಗಳ ಚಾವಡಿಯಲ್ಲಿ ತಂಬಿಲ ಸೇವೆ

ದೀಪಾವಳಿ ಹಬ್ಬದ ಪ್ರಯುಕ್ತ ಇಂದು(ನ.09) ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಬಲೀಂದ್ರ ಮರ ಹಾಕುವುದು ಹಾಗೂ ಬಲಿಪೂಜೆಯ ವೈದಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ಶ್ರೀ ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಅವರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಸಮಿತಿಯ ಸದಸ್ಯರಾದ ಬೆಳ್ಯಪ್ಪ ಗೌಡ ಖಂಡಿಗೆ, ಪದ್ಮಿನಿ ಗುಂಡಿಹಿತ್ಲು, ವಿನುಪ್ ಮಲ್ಲಾರ, ದಯಾನಂದ ಕಟ್ಟೆಮನೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ನಾಳೆ(ನ.10) ಬೆಳಿಗ್ಗೆ 10:00 ಗಂಟೆಗೆ ದೈವಗಳ ಚಾವಡಿಯಲ್ಲಿ ತಂಬಿಲ ಸೇವೆ ಹಾಗೂ ಮಧ್ಯಾಹ್ನ ಗೋಪೂಜೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading