ಸುಬ್ರಹ್ಮಣ್ಯದಲ್ಲಿ ದೀಪಾವಳಿ ಪ್ರಯುಕ್ತ ಸಾಮಗ್ರಿ ವಿತರಣೆ ಸನ್ಮಾನ

ಸುಬ್ರಹ್ಮಣ್ಯ ನವಂಬರ್ 09 : ಸುಬ್ರಹ್ಮಣ್ಯದ ಅನುಗ್ರಹ ಕನ್ಸ್ಟ್ರಕ್ಷನ್ ವತಿಯಿಂದ 19ನೇ ವರ್ಷದಲ್ಲಿ ಪ್ರತಿ ವರ್ಷದೀಪಾವಳಿಯಂದು ಸುಬ್ರಹ್ಮಣ್ಯದಲ್ಲಿ ದುಡಿಯುತ್ತಿರುವ ಹಾಗೂ ಇತರ ಕಡೆಗಳಲ್ಲಿ ಅವರೊಂದಿಗೆ ದುಡಿಯುತ್ತಿರುವ ಕಾರ್ಮಿಕರಿಗೆ ಡ್ರೆಸ್ ಹಾಗೂ ಸಾಮಗ್ರಿ ವಿತರಣಾ ಕಾರ್ಯಕ್ರಮ ಸೋಮವಾರದಂದು ಡಾ. ರವಿ ಕಕ್ಕೆಪದವು ಅವರ ದೋಣಿಮಕ್ಕಿ ಸಭಾಗಣದಲ್ಲಿ ನಡೆಯಿತು.

. . . . . . . . .

ಇದೇ ಸಂದರ್ಭದಲ್ಲಿ ಅನುಗ್ರಹ ಕನ್ಸ್ಟ್ರಕ್ಷನ್ ಸಂಸ್ಥೆಯಲ್ಲಿ 17 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿರುವ ಯೋಗೀಶ್ ಹಾಗೂ ದಾಮೋದರ ಅವರನ್ನು ಗುರುಸ್ವಾಮಿಯವರು ಗೌರವಿಸಿದರು. ಅವರು ಮಾತನಾಡಿ “ಡಾ. ರವಿ ಕಕ್ಕೆಪದವು ಅವರು ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಗೌರವಿಸುವುದು ಶ್ಲಾಘನೀಯ. ಕಾರ್ಮಿಕರ ಸೇವೆಯನ್ನ ಸಂಸ್ಥೆಯ ಬೆನ್ನೆಲುಬು ಎಂದು ಪರಿಗಣಿಸಿರುತ್ತಾರೆ. ಕಾರ್ಮಿಕರ ನಿಯತ್ತಿನ ಕೆಲಸ ಕಾರ್ಯಗಳು ಅವರ ಸಂಸ್ಥೆಯನ್ನು ಇನ್ನಷ್ಟು ಉತ್ತಂಗಕೇರಿಸಿದೆ. ಅವರಿಗೂ ಹಾಗೂ ಅವರ ಕುಟುಂಬಕ್ಕೂ ಆ ದೇವರು ಇನ್ನಷ್ಟು ಸೇವೆಯನ್ನು ಮಾಡುವ ಭಾಗ್ಯವನ್ನು ಅನುಗ್ರಹಿಸಲಿ” ಎಂದು ನುಡಿದರು.

. . . . . . .

ಈ ಸಂದರ್ಭದಲ್ಲಿ ಗೀತಾ ರವಿ ಕಕ್ಕೆಪದವು, ಜಗದೀಶ್, ಅಮೃತ, ಪೊಯ್ಯ ಪುಟ್ಟ ಮುಂತಾದವರು ಹಾಜರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading