- Thursday
- August 20th, 2026
ಪುತ್ತೂರು : ಕರ್ನಾಟಕ ಶಿಕ್ಷಣ ಇಲಾಖೆಯು ಶೀಘ್ರದಲ್ಲೇ 15,000 ಸರಕಾರಿ ಶಿಕ್ಷಕರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತಿದೆ. ಶಿಕ್ಷಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಒದಗಿಸಲು ಪುತ್ತೂರಿನ ಉನ್ನತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯಾದ ‘ವಿದ್ಯಾಮಾತಾ ಅಕಾಡೆಮಿ' ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳ ಪೂರ್ವ ಸಿದ್ಧತೆಗಾಗಿ ದಿನಾಂಕ 23.08.2026ರ ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ...
ಸುಳ್ಯದ ಜೂನಿಯರ್ ಕಾಲೇಜು ಬಳಿಯ ಸದರ್ನ್ ರೆಸಿಡೆನ್ಸಿಯಲ್ಲಿ ಶುದ್ಧ ಸಸ್ಯಾಹಾರಿ ಹೋಟೆಲ್ ಮಹಾವೀರ ಆ.20 ರಂದು ಪ್ರಾರಂಭಗೊಂಡಿತು.
ಸುಬ್ರಹ್ಮಣ್ಯ ಆಗಸ್ಟ್ 20 : ಸುಬ್ರಹ್ಮಣ್ಯದಲ್ಲಿ 24 ಗಂಟೆಯೂ ನುರಿತ ವೈದ್ಯರು ಹಾಗೂ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇದೀಗ ಮತ್ತಷ್ಟು ಬಲಗೊಂಡಿದೆ. ಸುಬ್ರಹ್ಮಣ್ಯದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ 24*7 ಚಿಕಿತ್ಸಾ ಸೌಲಭ್ಯಕ್ಕಾಗಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಕುಮಾರಧಾರ...
ಸುಬ್ರಹ್ಮಣ್ಯ, ಆಗಸ್ಟ್ 20 : ಕಸ್ತೂರಿರಂಗನ್ ಅಂತಿಮ ವರದಿಯ ಕರಡು ಪ್ರತಿಗೆ ಒಕ್ಕೊರಲಿನಿಂದ ಆಕ್ಷೇಪಣೆ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳ ಬಾಧಿತ ಪ್ರದೇಶಗಳ ರೈತರು ಹಾಗೂ ಗ್ರಾಮಸ್ಥರ ಜಿಲ್ಲಾ ಮಟ್ಟದ ಸಭೆ ಗುರುವಾರ ಸುಬ್ರಹ್ಮಣ್ಯದಲ್ಲಿ ನಡೆಯಿತು. ಬೆಳ್ತಂಗಡಿ, ಕಡಬ,...
ಆಧುನಿಕ ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಸಮಾಜ ಸೇವಾಕಾರ್ಯಗಳನ್ನು ಕಳೆದ 16 ವರ್ಷ ಗಳಿಂದ ಮಾಡಿ ಕೊಂಡು ಬರುತ್ತಿರುವ ಸುಳ್ಯದ ಪ್ರಮುಖ ರನ್ನು ಒಳಗೊಂಡ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಕಾರ್ಯ ಚಟುವಟಿಕೆಗಳನ್ನು ಕೇಂದ್ರೀಕರಿಸಲು ಹಾಗೂ ಸುಳ್ಯದ ಸೌಹಾರ್ದತೆ ಮತ್ತು ಸಾಮರಸ್ಯದ ಸಂಕೇತ ವಾದ...
ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ(ರಿ.) ಏನೆಕಲ್ಲು ಇದರ ಆಶ್ರಯದಲ್ಲಿ ಐದನೇ ವರ್ಷದ ಕೃಷ್ಣೋತ್ಸವ- 2026 ಶ್ರೀಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮ ದಿನಾಂಕ 30 ಆಗಸ್ಟ್ 2026 ಆದಿತ್ಯವಾರ ಶ್ರೀ ಆದಿಶಕ್ತಿ ಭಜನಾ ಮಂದಿರ(ರಿ.) ಏನೆಕಲ್ ಸಭಾಭವನದಲ್ಲಿ ನಡೆಯಲಿದೆ. ಕಲಾಮಾಯೆ ಸಂಸ್ಥೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ತನ್ನ ಹತ್ತನೇ ವರ್ಷದ ದಶ ಸಂಭ್ರಮವನ್ನು ಆಚರಿಸಿಕೊಂಡಿದ್ದು ಇದೀಗ ಐದನೇ...
ಪುತ್ತೂರು, ಆ.20 : ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.-2ರ ಅಧ್ಯಕ್ಷರಾಗಿ ಸುಳ್ಯ ತಾಲೂಕಿನ ಕಳಂಜದ ಶ್ರೀ ವಿಶ್ವನಾಥ ರೈ ಕಳಂಜ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆ.20ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಸಭಾಂಗಣದಲ್ಲಿ ನಡೆದ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ರಾಜ್ಯ ಅಖಿಲ...
ಸುಳ್ಯ ತಾಲೂಕು ಕಛೇರಿಯ ಹೊರಗಿಟ್ಟಿದ್ದ ಅಜ್ಜಾವರ ಗ್ರಾಮದ ವ್ಯಕ್ತಿಯೊಬ್ಬರ ಬ್ಯಾಗ್ ಆ.20 ರಂದು 11:30ಕ್ಕೆ ಕಾಣೆಯಾಗಿದೆ. ಈ ಬ್ಯಾಗಿನಲ್ಲಿ ಅತ್ಯಮೂಲ್ಯ ದಾಖಲೆ ಪತ್ರಗಳು ಇವೆ ಎಂದು ತಿಳಿದು ಬಂದಿದೆ.ಆದ್ದರಿಂದ ಈ ಬ್ಯಾಗ್ ಯಾರಿಗಾದರೂ ಸಿಕ್ಕಿದ್ದರೆ ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ತಿಳಿಸಲಾಗಿದೆ. ಮೊ : 9481019210
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ Shenzyn Private Limited ಕಂಪೆನಿಯ ಸಂದರ್ಶನದಲ್ಲಿ 2026ನೇ ಸಾಲಿನ ಎಂ.ಬಿ.ಎ. ವಿಭಾಗದ ವಿದ್ಯಾರ್ಥಿ ಭೂಮಿಕಾ ಎನ್.ಎಸ್., ಇಂಚರ ಎಸ್.ಡಿ., ಮೋನಿಕಾ ಎಂ.ಆರ್., ಪಿ. ವಿಜೇತ್ ಶೆಟ್ಟಿ, ಗಾನವಿ, ಪೂಜಾ ಬಿ.ಆರ್., ರಿಷಿಕ ಎಂ.ಜಿ., ಸರಣ್ಯ ಎಂ.ಎಸ್. ಮತ್ತು ಸಿಂಚನ ಸಿ.ಸಿ. ಆಯ್ಕೆಯಾಗಿರುತ್ತಾರೆ. ಇವರಿಗೆ ಕಂಪೆನಿಯಿಂದ ರೂ. 4.5 ಲಕ್ಷ ವಾರ್ಷಿಕ...
ಸುಳ್ಯ: ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಪ್ರತಿಭಟನೆ ನಡೆಯಲಿದೆ. ಆಗಸ್ಟ್ 21ರಂದು ಶುಕ್ರವಾರ ಪೂರ್ವಾಹ್ನ 10.30ಕ್ಕೆ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಡೆಯಲಿರುವ...
Loading posts...
All posts loaded
No more posts
