ಮಂಡೆಕೋಲು : ರಬ್ಬರ್ ಸೊಸೈಟಿಯ ವಿಶೇಷ ಸಭೆ, ಸದಸ್ಯರಿಗೆ ಸದಸ್ಯತ್ವ ಕಾರ್ಡ್ ವಿತರಣೆ

ಸುಳ್ಯ : ಮಂಡೆಕೋಲು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿಯ ವಿಶೇಷ ಸಭೆ ಗ್ರಾಮ ಪಂಚಾಯತ್ ಕಟ್ಟಡದ ಸಭಾ ಭವನದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಉದ್ಘಾಟಿಸಿದರು.

. . . . . . . . .

ರಬ್ಬರ್ ಬೋರ್ಡ್ ನ ಸುಳ್ಯ ಕ್ಷೇತ್ರದ ವೀಕ್ಷಣಾಧಿಕಾರಿ ಪವಿತ್ರ ಅವರು ಸರಕಾರದಿಂದ ದೊರೆಯುವ ವಿವಿಧ ಸವಲತ್ತುಗಳಾದ ಗುಂಪು ವಿಮೆ, ರಬ್ಬರ್ ಮೂರ್ತೆದಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ರೈನ್ ಗಾರ್ಡ್ ಹಾಗೂ ಇನ್ನಿತರ ವಿಷಯಗಳ ಕುರಿತಂತೆ ರಬ್ಬರ್ ಬೆಳೆಗಾರರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ರಬ್ಬರ್ ಸೊಸೈಟಿಯ ಸದಸ್ಯರಿಗೆ ಸದಸ್ಯತ್ವ ಕಾರ್ಡ್ ಬಿಡುಗಡೆಗೊಳಿಸಿ ಬಳಿಕ ವಿತರಿಸಲಾಯಿತು.

. . . . . . .

ಸಭೆಯ ಅಧ್ಯಕ್ಷತೆಯನ್ನು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿಯ ಅಧ್ಯಕ್ಷ ಗಣೇಶ್ ಮಾವಂಜಿ ವಹಿಸಿದ್ದರು. ಸಭೆಯಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ರಮೇಶ್ ಕೆ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ, ಸೊಸೈಟಿಯ ನಿರ್ದೇಶಕರಾದ ಉಮೇಶ್ ಮೇಲ್ಮನೆ, ಯಶೋಧಾ ಪಂಜಿಕಲ್ಲು ಮೊದಲಾದವರು ಉಪಸ್ಥಿತರಿದ್ದರು.

ಸರಸ್ವತಿ ಕಣೆಮರಡ್ಕ ಪ್ರಾರ್ಥಿಸಿದರು. ಸೊಸೈಟಿಯ ನಿರ್ದೇಶಕ ದಾಮೋದರ ಗೌಡ ಮಿತ್ತಪೇರಾಲು ಅವರು ಸ್ವಾಗತಿಸಿದರು. ಸೊಸೈಟಿಯ ಉಪಾಧ್ಯಕ್ಷ ಮುರಳೀಧರ ವಿ ರೈ ವರದಿ ವಾಚಿಸಿದರು. ನಿರ್ದೇಶಕ ಯದುಗಿರಿ ರಾಮಚಂದ್ರ ಅವರು ಧನ್ಯವಾದ ಸಮರ್ಪಿಸಿದರು. ನಿರ್ದೇಶಕಿ ಭಾರತಿ ಉಗ್ರಾಣಿಮನೆ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading