ಸುಳ್ಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ | ತನ್ನ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಸ್ವಚ್ಛತೆ ನಿರ್ವಹಿಸುವ ಪೌರ ಕಾರ್ಮಿಕರನ್ನು ಗೌರವಿಸೋಣ; ತಹಶೀಲ್ದಾರ್

ಸುಳ್ಯ ನಗರ ಪಂಚಾಯತ್, ಕರ್ನಾಟಕ ಪೌರ ಸೇವಾ ನೌಕರರ ಸಂಘದ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು
ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಆಚರಿಸಲಾಯಿತು
ಅಧ್ಯಕ್ಷತೆಯನ್ನು ಮುಖ್ಯಾಧಿಕಾರಿ ಬಸವರಾಜ್ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ತಾಲೂಕು ತಹಶೀಲ್ದಾರ್, ನಗರ ಪಂಚಾಯತ್ ಆಡಳಿತಾಧಿಕಾರಿ ಮಂಜುಳಾ ಮಾತನಾಡಿ ಪೌರ ಕಾರ್ಮಿಕರು ಸಮಾಜದ ಅವಿಭಾಜ್ಯ ಅವರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯ ಎಂದರು.
ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ಪೌರ ಕಾರ್ಮಿಕರನ್ನು ಮತ್ತು ನೇರ ಪಾವತಿ ಪಡೆಯುವ ಕಾರ್ಮಿಕರನ್ನು ಸನ್ಮಾನಿಸಿದರು
ಸಮಾರಂಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಲಸ್ರಾದೊ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಾರಾಯಣ ಭಾಗವಹಿಸಿದ್ದರು.
ವೇದಿಕೆಯಲ್ಲಿ ಪೌರ ಕಾರ್ಮಿಕರ ಮೇಲುಸ್ತುವಾರಿ ಒ.ಎಸ್. ತಿಮ್ಮಪ್ಪ, ಹಿರಿಯ ಪೌರ ಕಾರ್ಮಿಕ ವೇದಿಕೆಯಲ್ಲಿದ್ದರು.

. . . . . . . . .

ನಗರ ಪಂಚಾಯತ್ ಕಂದಾಯ ನಿರೀಕ್ಷಕ ಸುದೇವ ಸ್ವಾಗತಿಸಿ, ಎಸ್.ಜೆ.ಎಸ್.ಆರ್.ವೈ. ಸಮುದಾಯ ಸಂಘಟಕಿ ಜಯಲಕ್ಷ್ಮಿ ವಂದಿಸಿದರು.
ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪೌರ ಕಾರ್ಮಿಕರನ್ನು ಪುಷ್ಪ ವರ್ಷದೊಂದಿಗೆ ಸಭಾಂಗಣಕ್ಕೆ ಬರ ಮಾಡಿಕೊಳ್ಳಲಾಯಿತು.
ಇಡೀ ವರ್ಷ ಕಾಯಕದಲ್ಲಿ ನಿರತರಾಗುವ ಪೌರ ಕಾರ್ಮಿಕರ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನೂ ಮನಸೂರೆ ಗೊಳಿಸಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading