ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಸುಲಭ ಕಂತು ಯೋಜನೆ : ₹1 ಲಕ್ಷ ಮೌಲ್ಯದ ಬಹುಮಾನ ಗೆದ್ದ ಚೇತನ್ ಅರಂತೋಡು

ಸುಳ್ಯ : ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಬಂಪರ್ ಬಹುಮಾನ ಯೋಜನೆಯ ಮೊದಲನೇ ಡ್ರಾ ಸೆ.15ರಂದು ಸುಳ್ಯದ ಅಂಬೆಟಡ್ಕದಲ್ಲಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ನಡೆಯಿತು.

. . . . . . . . .

ಡ್ರಾದಲ್ಲಿ ಕಾರ್ಡ್ ಸಂಖ್ಯೆ 5570ರ ಚೇತನ್ ಅರಂತೋಡು ಅವರು ₹1 ಲಕ್ಷ ಮೌಲ್ಯದ ಗೃಹೋಪಯೋಗಿ ಇಲೆಕ್ಟ್ರಾನಿಕ್ ಸಾಮಗ್ರಿಗಳ ಬಹುಮಾನವನ್ನು ಗೆದ್ದುಕೊಂಡಿದ್ದಾರೆ.ಅದೃಷ್ಟ ಡ್ರಾ ಮೂಲಕ ವಿಜೇತರ ಆಯ್ಕೆಯನ್ನು ಖ್ಯಾತ ಸಂಗೀತ ಗಾಯಕ ಹಾಗೂ ಕಿರುತೆರೆ ನಟ ಶಶಿಧರ ಕೋಟೆ ನೆರವೇರಿಸಿದರು.

. . . . . . .

ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರು, ಸಿಬ್ಬಂದಿಗಳು ಹಾಗೂ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading