ಬಾಳಿಲದಲ್ಲಿ ಪುರಾಣ ಸಾಹಿತ್ಯ ಸಂಭ್ರಮ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿದ್ಯಾಭೋಧಿನಿ ಪ್ರೌಢ ಶಾಲೆ ಬಾಳಿಲ ಇದರ ಸಹಯೋಗದಲ್ಲಿ ನವಂಬರ್ 4 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುರಾಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ವಿದ್ಯಾಭೋದಿನೀ ಪ್ರೌಢ ಶಾಲೆ ಬಾಳಿಲ ಇಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲೆಯ ಅಧ್ಯಕ್ಷರಾದ ರಾಧಾಕೃಷ್ಣರಾವ್ ಇವರು ಮಾತನಾಡಿ ಪುರಾಣ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಯನ್ನು ಮೂಡಿಸಬಹುದೆಂದು ತಿಳಿಸಿದರು. ಮಳೆಮಾಪಕ ತಜ್ಞರು ಹಾಗೂ ಶಾಲೆಯ ಸಂಚಾಲಕರಾದ ಪಿ ಜಿ ಎಸ್ ಎನ್ ಪ್ರಸಾದ್ ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ತದನಂತರ ವೆಂಕಟ ರಾಮ್ ಭಟ್ ಹಾಗು ಕುಮಾರಿ ರಚನಾ ಚಿದ್ಗಲ್ ಅವರಿಂದ ಭರತನ ಬ್ರಾತ್ರ ಪ್ರೇಮ ಎಂಬ ವಿಷಯದ ಬಗ್ಗೆ ಗಾಯನ ಮತ್ತು ವಾಚನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ಪೆರಾಲ್ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ ಮತ್ತು ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಇವರು ಉಪಸ್ಥಿರಿದ್ದರು. ಕಾರ್ಯಕ್ರಮ ಸಂಚಾಲಕರಾದ ಸಂಜೀವ ಕುದ್ಪಾಜೆ ಇವರು ಸ್ವಾಗತಿಸಿ, ಶಾಲಾ ಮುಖ್ಯಸ್ಥರಾದ ಉದಯಕುಮಾರ್ ರೈ ಎಸ್ ಇವರು ವಂದಿಸಿದರು. ಶಿಕ್ಷಕ ಲೋಕೇಶ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading