ಕರ್ನಾಟಕ ರಾಜ್ಯ ಅಂಡರ್-೧೬ ಕ್ರಿಕೆಟ್ ತಂಡಕ್ಕೆ ಬೆಳ್ಳಾರೆಯ ಅವನೀಶ ಶಾಮ್ ಆಯ್ಕೆ – ಮಂಗಳೂರು ವಲಯದಿಂದ ರಾಜ್ಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ

. . . . . . . . .

ಬೆಳ್ಳಾರೆ: ಕರ್ನಾಟಕ ರಾಜ್ಯ ಅಂಡರ್ 16 ಕ್ರಿಕೆಟ್ ತಂಡಕ್ಕೆ ಬೆಳ್ಳಾರೆಯ ಯುವ ಕ್ರಿಕೆಟ್ ಪ್ರತಿಭೆ ಅವನೀಶ ಶಾಮ್ ಆಯ್ಕೆಯಾಗಿದ್ದು, ಈ ಮೂಲಕ ತಮ್ಮ ಊರು ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಮಂಗಳೂರು ವಲಯದಿಂದ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಅವನೀಶ್ ಶ್ಯಾಮ್ ಪಾತ್ರರಾಗಿದ್ದಾರೆ.

. . . . . . .

ಸತತ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ ಕ್ರಿಕೆಟ್ ಮೇಲಿನ ಅಪಾರ ಆಸಕ್ತಿಯಿಂದ ಬೆಳೆದು ಬಂದಿರುವ ಅವನೀಶ್ ಶ್ಯಾಮ್ ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯ ಅಂಡರ್-೧೪ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಅವರ ತಂದೆ ಮುರಳೀಧರ ಎಸ್. ಅವರ ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಬೆಂಬಲವೂ ಅವನೀಶ ಅವರ ಕ್ರಿಕೆಟ್ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading