ಸುಳ್ಯದ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ದೀಪಾವಳಿ ಧಮಾಕ : “ಸ್ವರ್ಣಂ ದೀಪಂ” ವಿಶೇಷ ಕೊಡುಗೆ

ಸುಳ್ಯ : ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸಂತೋಷ್ ಎಂಪೋರಿಯಂ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಚಿನ್ನಾಭರಣ ಮಳಿಗೆ ‘ಸ್ವರ್ಣಂ ಜ್ಯುವೆಲ್ಸ್’ನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ಗ್ರಾಹಕರಿಗಾಗಿ ‘ಸ್ವರ್ಣಂ ದೀಪಂ’ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದೆ.

. . . . . . . . .

ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರಂತರ ಹೊಸತನವನ್ನು ಪರಿಚಯಿಸುತ್ತಿರುವ ಸಂಸ್ಥೆಯು, ಈ ಬಾರಿಯ ಹಬ್ಬದ ಖರೀದಿಗೆ ಪೂರಕವಾಗಿ ಆಕರ್ಷಕ ರಿಯಾಯಿತಿಗಳನ್ನು ಒದಗಿಸಿದೆ.

. . . . . . .

ಆಫರ್ ಮುಖ್ಯಾಂಶಗಳು – ಚಿನ್ನಾಭರಣ : ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ (ತಯಾರಿಕಾ ಶುಲ್ಕ) ಮೇಲೆ ಗರಿಷ್ಠ ಶೇ. 50ರ ವರೆಗೆ ನೇರ ರಿಯಾಯಿತಿ.

ವಜ್ರಾಭರಣ : ಡೈಮಂಡ್ ಆಭರಣಗಳ ಪ್ರತಿ ಕ್ಯಾರೆಟ್‌ಗೆ ರೂ. 10,000 ರಿಯಾಯಿತಿ.

ಅಪೂರ್ವ ಸಂಗ್ರಹ : ಅತ್ಯುನ್ನತ ವಿವಿಎಸ್ (VVS) ಗುಣಮಟ್ಟದ ಆಭರಣಗಳು ಹಾಗೂ 18KT ಆಭರಣಗಳ ವಿನೂತನ ಶ್ರೇಣಿ ಲಭ್ಯ.

ವೈವಿಧ್ಯಮಯ ವಿನ್ಯಾಸ : 250ಕ್ಕೂ ಮಿಕ್ಕಿದ ನವೀನ ವಿನ್ಯಾಸದ ಕರಿಮಣಿ ಮಾಲೆಗಳು ಹಾಗೂ 500ಕ್ಕೂ ಅಧಿಕ ವಿನ್ಯಾಸಗಳ ಡೈಮಂಡ್ ಆಭರಣಗಳ ಬೃಹತ್ ಪ್ರದರ್ಶನ.

ಎಕ್ಸ್‌ಚೇಂಜ್ ಕೊಡುಗೆ : ಗ್ರಾಹಕರ ಬಳಿಯಿರುವ ಹಳೆಯ ಕರಿಮಣಿಗಳನ್ನು ನೂತನ ಹಾಲ್‌ಮಾರ್ಕ್ 916 ಮಾದರಿಗೆ ಸುಲಭವಾಗಿ ಬದಲಾಯಿಸಿಕೊಳ್ಳುವ (Exchange) ಸುವರ್ಣಾವಕಾಶ.

ದೀಪಾವಳಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸಂಸ್ಥೆಯು ರೂಪಿಸಿರುವ ಈ ಸೀಮಿತ ಅವಧಿಯ ಆಫರ್ ಸೌಲಭ್ಯವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಸ್ವರ್ಣಂ ಜ್ಯುವೆಲ್ಸ್ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading