“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜು.27)ದಿಂದ ಶನಿವಾರ(ಆ.01)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ಅಡಿಕೆಯ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಸ್ಥಿರತೆ ; ಕಾಳುಮೆಣಸು ಹಾಗೂ ಕೊಬ್ಬರಿ ದರಗಳೂ ಯಥಾಸ್ಥಿತಿ ; ರಬ್ಬರ್ ಧಾರಣೆಯಲ್ಲಿ ಕೊಂಚ ಚೇತರಿಕೆ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್‌ಸೈಟ್‌ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜುಲೈ 27 ಸೋಮವಾರದಿಂದ ಆಗಸ್ಟ್ 01 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದಿರುವ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್ ವರದಿ”ಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

1) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ : ಮುಖ್ಯ ಅಡಿಕೆ ಹಾಗೂ ಉಪ ಉತ್ಪನ್ನಗಳಲ್ಲಿ ಸಂಪೂರ್ಣ ಸ್ಥಿರತೆ..!
ಈ ವಾರ ಅಂದರೆ ಜುಲೈ 27 ಸೋಮವಾರದಿಂದ ಆಗಸ್ಟ್ 01 ಶನಿವಾರದವರೆಗಿನ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಅಡಿಕೆಯ ಪ್ರಮುಖ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್ ಹಾಗೂ ಉಪ ಉತ್ಪನ್ನಗಳಾದ ಫಟೋರಾ, ಉಳ್ಳಿಗಡ್ಡೆ, ಕರಿಗೋಟು ಧಾರಣೆಗಳಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿತ್ತು.
ಹೊಸ ಅಡಿಕೆ : ಸೋಮವಾರದಂದು ಕನಿಷ್ಠ 390 ರಿಂದ ಗರಿಷ್ಠ 475 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಕನಿಷ್ಠ 390 ರಿಂದ ಗರಿಷ್ಠ 475 ರೂಪಾಯಿಗಳಲ್ಲೇ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಹಳೆ ಅಡಿಕೆ ಹಾಗೂ ಡಬಲ್ ಚೋಲ್ : ಸೋಮವಾರದಂದು ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿಗಳಲ್ಲೇ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಫಟೋರಾ : ಸೋಮವಾರದಂದು ಕನಿಷ್ಠ 320 ರಿಂದ ಗರಿಷ್ಠ 375 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಕನಿಷ್ಠ 320 ರಿಂದ ಗರಿಷ್ಠ 375 ರೂಪಾಯಿಗಳಲ್ಲೇ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಉಳ್ಳಿಗಡ್ಡೆ : ಸೋಮವಾರದಂದು ಕನಿಷ್ಠ 250 ರಿಂದ ಗರಿಷ್ಠ 270 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಕನಿಷ್ಠ 250 ರಿಂದ ಗರಿಷ್ಠ 270 ರೂಪಾಯಿಗಳಲ್ಲೇ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಕರಿಗೋಟು : ಸೋಮವಾರದಂದು ಕನಿಷ್ಠ 225 ರಿಂದ ಗರಿಷ್ಠ 255 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಕನಿಷ್ಠ 225 ರಿಂದ ಗರಿಷ್ಠ 255 ರೂಪಾಯಿಗಳಲ್ಲೇ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)

2) ಕಾಳುಮೆಣಸು, ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳಲ್ಲಿ ಸಂಪೂರ್ಣ ಸ್ಥಿರತೆ..!
ಈ ವಾರ ಅಂದರೆ ಜುಲೈ 27 ಸೋಮವಾರದಿಂದ ಆಗಸ್ಟ್ 01 ಶನಿವಾರದವರೆಗಿನ ಕ್ಯಾಂಪ್ಕೋ ಮಾರುಕಟ್ಟೆಯ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿತ್ತು.
ಕಾಳುಮೆಣಸು : ಸೋಮವಾರದಂದು ಕನಿಷ್ಠ 585 ರಿಂದ ಗರಿಷ್ಠ 680 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಕನಿಷ್ಠ 585 ರಿಂದ ಗರಿಷ್ಠ 680 ರೂಪಾಯಿಗಳಲ್ಲೇ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಕೊಬ್ಬರಿ : ಸೋಮವಾರದಂದು ಕನಿಷ್ಠ 130 ರಿಂದ ಗರಿಷ್ಠ 162 ರೂಪಾಯಿ ಇದ್ದ ಬೆಲೆ ಶನಿವಾರದಂದು ಕೂಡ ಕನಿಷ್ಠ 130 ರಿಂದ ಗರಿಷ್ಠ 162 ರೂಪಾಯಿಗಳಲ್ಲೇ ಮುಂದುವರಿದಿತ್ತು.(ಸಂಪೂರ್ಣ ಸ್ಥಿರತೆ)
ಕೊಕ್ಕೋ(ಹಸಿ/ಒಣ) : ಸೋಮವಾರದಿಂದ ಶನಿವಾರದವರೆಗೆ ಯಾವುದೇ ಏರಿಳಿತವಿಲ್ಲದೇ ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ ಹಾಗೂ ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿಗಳಲ್ಲೇ ವಾರಪೂರ್ತಿ ಸಂಪೂರ್ಣ ಸ್ಥಿರವಾಗಿ ನಿಂತಿದ್ದವು.

3) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆ : ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಚೇತರಿಕೆ..!
ಈ ವಾರ ಅಂದರೆ ಜುಲೈ 27 ಸೋಮವಾರದಿಂದ ಆಗಸ್ಟ್ 01 ಶನಿವಾರದವರೆಗಿನ ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಲಾಟ್ ರಬ್ಬರ್ ನಲ್ಲಿ 2 ರೂಪಾಯಿ ಏರಿಕೆ ಕಂಡುಬಂದಿದ್ದರೆ ಗ್ರೇಡ್ ರಬ್ಬರ್ ಹಾಗೂ ಸ್ಕ್ರ್ಯಾಪ್ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ವಿಭಾಗದಲ್ಲಿ ತಲಾ 1 ರೂಪಾಯಿ ಏರಿಕೆ ಕಂಡುಬಂದಿತ್ತು.
ಗ್ರೇಡ್ ರಬ್ಬರ್ : ಸೋಮವಾರದಂದು 278 ರೂಪಾಯಿ ಇದ್ದ ಬೆಲೆ ಶನಿವಾರದಂದು 279 ರೂಪಾಯಿಗೆ ತಲುಪುವುದರೊಂದಿಗೆ 1 ರೂಪಾಯಿ ಏರಿಕೆ ಕಂಡಿತ್ತು.
ಲಾಟ್ ರಬ್ಬರ್ : ಸೋಮವಾರದಂದು 243 ರೂಪಾಯಿ ಇದ್ದ ಬೆಲೆ ಶನಿವಾರದಂದು 245 ರೂಪಾಯಿಗೆ ತಲುಪುವುದರೊಂದಿಗೆ 2 ರೂಪಾಯಿ ಏರಿಕೆ ಕಂಡಿತ್ತು.
ಸ್ಕ್ರ್ಯಾಪ್(ಪ್ರಥಮ/ದ್ವಿತೀಯ) : ಸೋಮವಾರದಂದು ಸ್ಕ್ರ್ಯಾಪ್ ಪ್ರಥಮ ದರ್ಜೆ 169 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 159 ರೂಪಾಯಿ ಇದ್ದ ಬೆಲೆ ಶನಿವಾರದಂದು ತಲಾ 1 ರೂಪಾಯಿ ಏರಿಕೆ ಕಂಡು ಪ್ರಥಮ ದರ್ಜೆ 170 ರೂಪಾಯಿ ಹಾಗೂ ದ್ವಿತೀಯ ದರ್ಜೆ 160 ರೂಪಾಯಿಗಳಿಗೆ ತಲುಪಿತ್ತು.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಈ ವಾರದ(ಜುಲೈ 27 ರಿಂದ ಆಗಸ್ಟ್ 01) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತಿದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading