ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯಲ್ಲಿ ಪದವಿ ಪ್ರಧಾನ ಸಮಾರಂಭ – “ಫಿಸಿಯೋಥೆರಪಿ ರೋಗಿಗಳ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ” : ಡಾ| ಕೆ.ವಿ ಚಿದಾನಂದ ; “ಗ್ರಾಮೀಣ ಪ್ರದೇಶವನ್ನು ಶಿಕ್ಷಣದ ಮೂಲಕ ವಿದ್ಯಾಕಾಶಿಯನ್ನಾಗಿ ರೂಪಿಸಿದ ಡಾ| ಕೆ.ವಿ.ಜಿ ಅವರ ದೂರದೃಷ್ಟಿ, ಕನಸು ಮತ್ತು ಸಂಕಲ್ಪ ನಿಜಕ್ಕೂ ಅದ್ಭುತವಾಗಿದೆ” ಡಾ| ದಿಲೀಪ್ ಎನ್.ಆರ್

ಸುಳ್ಯ ಆ.04 : ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂಗಸಂಸ್ಥೆಯಾದ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯಲ್ಲಿ 2026ನೇ ಸಾಲಿನ ಪದವಿ ಪ್ರಧಾನ ಸಮಾರಂಭವು ಆ.04 ಮಂಗಳವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಅಧ್ಯಕ್ಷರಾದ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಕೆ.ವಿ ಚಿದಾನಂದ ಅವರು...

ಸುಬ್ರಹ್ಮಣ್ಯ : ಕುಕ್ಕೆ ಸಂಜೀವಿನಿ ಸೇವಾ ಟ್ರಸ್ಟ್ ನಿಂದ ಬಹುಮಾನ ಕೊಡುಗೆ

ಸುಬ್ರಹ್ಮಣ್ಯ ಆಗಸ್ಟ್ 04 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುಬ್ರಹ್ಮಣ್ಯ ಠಾಣೆಯ ವತಿಯಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಷನಲ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಸೇರುವ ಅಭ್ಯರ್ಥಿಗಳಿಗಾಗಿ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಿದ್ದರು. ರಾಜ್ಯದ ವಿವಿದೆಡೆಗಳಿಂದ ಸುಮಾರು 300ಕ್ಕೂ ಮಿಕ್ಕಿ ಆಸಕ್ತ ಅಭ್ಯರ್ಥಿಗಳು ಮಾದರಿ ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು....
Ad Widget

ಕೊಲ್ಲಮೊಗ್ರು : ಗ್ರಾಮಸಭೆಯಲ್ಲಿ ಜಲಜೀವನ್ ಯೋಜನೆಯ ಬಗ್ಗೆ ಬಿಸಿಬಿಸಿ ಚರ್ಚೆ – ಪಂಚಾಯತ್ ಅನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ; ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟ ಗ್ರಾಮಸ್ಥರು

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ಆ‌.03 ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯ ನೊಡೆಲ್ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಪೂವಯ್ಯ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪಿ.ಡಿ.ಒ ಚೆನ್ನಪ್ಪ ನಾಯ್ಕ ಉಪಸ್ಥಿತರಿದ್ದರು. ಮೆಸ್ಕಾಂ ನ ಚಿದಾನಂದ, ಶಿಕ್ಷಣ ಇಲಾಖೆಯ ಕುಶಾಲಪ್ಪ ತುಂಬತ್ತಾಜೆ, ಅರಣ್ಯ ಇಲಾಖೆಯ ಅಪೂರ್ವ ಅಚ್ರಪ್ಪಾಡಿ, ಗ್ರಾಮ ಲೆಕ್ಕಾಧಿಕಾರಿ ಮಧು ಕೆ.ಬಿ, ಮಹಿಳಾ ಮತ್ತು...

ಚಿನ್ನದ ಕಿವಿಯೋಲೆ ಕಳೆದುಹೋಗಿದೆ

ಮಾವಿನಕಟ್ಟೆ, ಗುತ್ತಿಗಾರು, ಹರಿಹರ ಪಳ್ಳತ್ತಡ್ಕ ಪರಿಸರದಲ್ಲಿ ಆಗಸ್ಟ್ 03 ಸೋಮವಾರದಂದು ಒಂದು ಜೊತೆ ಚಿನ್ನದ ಕಿವಿಯೋಲೆ ಕಳೆದು ಹೋಗಿದ್ದು, ಸಿಕ್ಕಿದವರು ದಯವಿಟ್ಟು 7022463156, 9448310236 ಸಂಪರ್ಕಿಸಿ ಕಿವಿಯೋಲೆಯನ್ನು ಹಿಂತಿರುಗಿಸಬೇಕೆಂದು ಕಿವಿಯೋಲೆ ಕಳೆದುಕೊಂಡವರು ವಿನಂತಿಸಿಕೊಂಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

ಆ.05 ರಂದು ಮರಿಯಂ ಅಬಯ ಪರ್ದಾ ಮಳಿಗೆ ಶುಭಾರಂಭ

ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಹಿಂದೂಸ್ಥಾನ್ ಸುಳ್ಯ ಸೆಂಟರ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಮರಿಯಂ ಅಬಯ ಪರ್ದಾ ಮಳಿಗೆ ಆ.5 ರಂದು ಶುಭಾರಂಭ ಕಾಣಲಿದೆ‌. ಮಳಿಗೆಯಲ್ಲಿ ಸಾಂಪ್ರದಾಯಿಕ ಶೈಲಿಯ ಪರ್ದಾಗಳು, ಹಿಜಾಬ್, ಶಾಲುಗಳು, ದೇಶಿ, ವಿದೇಶಿ ಶೈಲಿಯ ಮತ್ತು ಅತ್ಯಾಧುನಿಕ ಮೊಡೆಲ್ ಗಳ ಪರ್ದಾ, ಹಿಜಾಬ್ ಭಾರೀ ರಿಯಾಯಿತಿಯ ದರದಲ್ಲಿ ದೊರೆಯುತ್ತದೆ. ಮಳಿಗೆ ಗ್ರಾಹಕರ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಿವೃತ್ತ ಮೆಸ್ಕಾಂ ಮೆಕ್ಯಾನಿಕ್ ಪಾಲಾಕ್ಷರಿಗೆ ಸನ್ಮಾನ

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಸುಬ್ರಹ್ಮಣ್ಯ ಉಪ ವಿಭಾಗದ ಹಾಗೂ ಶಾಖೆಯ ಸೀನಿಯರ್ ಮೆಕ್ಯಾನಿಕ್ ಪಾಲಾಕ್ಷರವರು ಜುಲೈ 31ರಂದು ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪಾಲಾಕ್ಷ ದಂಪತಿಗಳನ್ನು ಗೌರವಿಸಲಾಯಿತು. ಸನ್ಮಾನ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ವಿಶ್ವನಾಥ ನಡುತೋಟ ಅವರು ಮಾತನಾಡುತ್ತಾ "ಸೇವೆಗಳಲ್ಲಿ ಆರೋಗ್ಯ ಸೇವೆ ಎಷ್ಟು ಮುಖ್ಯವೋ...

ಇಂದಿನ(ಆಗಸ್ಟ್ 04) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ಕೊಬ್ಬರಿ ಸಂಪೂರ್ಣ ಸ್ಥಿರ ; ಲಾಟ್ ಮತ್ತು ಗ್ರೇಡ್ ರಬ್ಬರ್ ಬೆಲೆ ಭರ್ಜರಿ ಏರಿಕೆ..! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 04 ಆಗಸ್ಟ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 04) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಎಲಿಮಲೆ: ಅಪಾಯಕಾರಿ ಮರ ತೆರವು – ಅಮರ ಸುದ್ದಿ ವರದಿಯ ಫಲಶ್ರುತಿ

ಸುಳ್ಯ: ಎಲಿಮಲೆ ಮುಖ್ಯಪೇಟೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬೃಹತ್ ಮರದ ರೆಂಬೆಗಳು ಮುರಿದು ಬೀಳಲು ಆರಂಭವಾಗಿದ್ದು, ಸಮೀಪದ ಅಂಗಡಿಗಳು ಹಾಗೂ ಮರದ ಕೆಳಗೆ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗುವ ಆತಂಕ ಎದುರಾಗಿತ್ತು. ಅಲ್ಲದೆ, ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಇದೇ ಮರದ ಕೆಳಗೆ ನಿಲ್ಲಬೇಕಾಗಿದ್ದರಿಂದ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. https://amarasuddi.com/2026/06/09/elimale-36/ ಈ...

ಇಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಬಿಎಂಎಸ್ ಮನವಿ

ಸುಳ್ಯ: ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಘಟಕದ ವತಿಯಿಂದ ಸುಳ್ಯ ನಗರದಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಸ್ಥಳೀಯ ಶಾಸಕರು ಹಾಗೂ ಮೆಸ್ಕಾಂ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಆ. 4ರಂದು ಮನವಿ ಸಲ್ಲಿಸಲಾಯಿತು. ಸುಳ್ಯ ನಗರದಲ್ಲಿ ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ಹಾಗೂ...

ಕಂದಡ್ಕ ನೀರಬಿದಿರೆ ಭಾಗದಲ್ಲಿ ಬೀಡು ಬಿಟ್ಟ ಆನೆಗಳ ಹಿಂಡು; ಕೃಷಿ ಹಾನಿ | ಜನರಲ್ಲಿ ಭಯದ ವಾತಾವರಣ

ಕಂದಡ್ಕ ಪರಿಸರದಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟ ಆನೆಗಳ ಹಿಂಡು ಈ ಭಾಗದಲ್ಲಿ ನಿರಂತರ ಕೃಷಿ ತೋಟಗಳಿಗೆ ದಾಳಿ ನಡೆಸಿ ಹಾನಿ ಮಾಡುತ್ತಿದೆ. ಹೇಮಂತ್ ಕಂದಡ್ಕ, ಅಜಯ್ ಕೃಷ್ಣ ಕಂದಡ್ಕ, ನೀರಬಿದಿರೆ, ಮದಕ ಭಾಗದ ಹಲವು ಕೃಷಿ ತೋಟಗಳಿಗೆ ಆನೆಗಳ ಹಿಂಡು ದಾಳಿ ನಡೆಸಿ ಕೃಷಿ ಹಾನಿ ಮಾಡುತ್ತಿದೆ. ಈ ಭಾಗದ ನಿವಾಸಿಗಳು ಭಯದಲ್ಲಿ ಬದುಕುವಂತಾಗಿದೆ....
Loading posts...

All posts loaded

No more posts

error: Content is protected !!