ಐವರ್ನಾಡಿನ ಪರ್ಲಿಕಜೆ–ನಿಡುಬೆ–ಕೊಚ್ಚಿ ರಸ್ತೆ ಅಭಿವೃದ್ಧಿಗೆ ಬೇಡಿಕೆ : ಶಾಸಕರಿಗೆ ಮನವಿ ಸಲ್ಲಿಸಿದ ನಿಯೋಗ

ಐವರ್ನಾಡು ಗ್ರಾಮದ ಪರ್ಲಿಕಜೆ–ನಿಡುಬೆ–ಕೊಚ್ಚಿ (ಜಬಳೆ–ಕುದುಂಗು ಮಾರ್ಗವಾಗಿ) ರಸ್ತೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ರಸ್ತೆ ಫಲಾನುಭವಿಗಳ ಪರವಾಗಿ ಗ್ರಾಮಸ್ಥರ ನಿಯೋಗವು ಇಂದು ಸುಳ್ಯ ಶಾಸಕರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಚರ್ಚಿಸಿತು.

. . . . . . . . .

ಹಲವು ವರ್ಷಗಳಿಂದ ಸಮರ್ಪಕ ಅಭಿವೃದ್ಧಿ ಕಾಣದೆ ಉಳಿದಿರುವ ಈ ರಸ್ತೆಯು ಸ್ಥಳೀಯ ನಿವಾಸಿಗಳ ನಿತ್ಯ ಸಂಚಾರಕ್ಕೆ ಅತ್ಯಂತ ಅಗತ್ಯವಾಗಿದೆ. ಅಲ್ಲದೆ, ಇದು ಸುಳ್ಯ ಮತ್ತು ಪುತ್ತೂರು ತಾಲೂಕುಗಳ ನಡುವಿನ ಸಂಪರ್ಕ ಮಾರ್ಗವಾಗಿಯೂ ಮಹತ್ವ ಹೊಂದಿದೆ. ರಸ್ತೆಯ ಹದಗೆಟ್ಟ ಸ್ಥಿತಿ ಹಾಗೂ ಅದರ ಪರಿಣಾಮವಾಗಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಶಾಸಕರ ಗಮನಕ್ಕೆ ತಂದ ನಿಯೋಗವು, ಸಂಪೂರ್ಣ ರಸ್ತೆಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಗ್ರಾಮಸ್ಥರ ಹಾಗೂ ನಿಯೋಗದ ಮನವಿಯನ್ನು ಆಲಿಸಿದ ಶಾಸಕರು, ವಿಷಯದ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

. . . . . . .

ಐವರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆ. ಟಿ. ವೆಂಕಪ್ಪ, ಬಾಲಕೃಷ್ಣ ಕೊಚ್ಚಿ, ಮುರಳೀಧರ ಕೊಚ್ಚಿ, ಅಶ್ವಥ್ ಜಬಳೆ, ಮಹೇಶ್ ಜಬಳೆ, ಗಣೇಶ್ ಕೊಚ್ಚಿ, ಸಾತ್ವಿಕ್ ಕುದುಂಗು, ಪದ್ಮನಾಭ ಕರ್ಕುಂಜ ನಿಡುಬೆ, ಶರತ್ ಜಬಳೆ, ಸಚಿನ್ ಕೆ. ಬಿ., ಜೀವನ್ ಜಬಳೆ, ಸಚಿನ್ ಕೊಚ್ಚಿ, ಈಶ್ವರ ಕೊಚ್ಚಿ, ದಯಾನಂದ ಕುದುಂಗು, ಕಿಶನ್ ಜಬಳೆ ಹಾಗೂ ಅನಿಂದಿತ್ ಕೆ. ಎಸ್. ನಿಯೋಗದಲ್ಲಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading