ಮೈಸೂರು ದಸರಾ ನವರಾತ್ರಿ ಉತ್ಸವದಲ್ಲಿ ಸುಳ್ಯದ ‘ಅತ್ರೇಯ ನಾದ ಸಂಗಮ’|ಅ. 20ರಂದು ಚಾಮುಂಡಿ ಬೆಟ್ಟದಲ್ಲಿ ಅಶ್ವಿಜ್ ಅತ್ರೇಯ ತಂಡದಿಂದ ಲೈವ್ ಇನ್ ಕನ್ಸರ್ಟ್

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಸುಳ್ಯದ ಬಾಲ ಕಲಾವಿದ ಅಶ್ವಿಜ್ ಅತ್ರೇಯ ಅವರ ತಂಡದಿಂದ ‘ಅತ್ರೇಯ ನಾದ ಸಂಗಮ–ಅಶ್ವಿಜ್ ಅತ್ರೇಯ ಲೈವ್ ಇನ್ ಕನ್ಸರ್ಟ್’ ಸಂಗೀತ ಕಾರ್ಯಕ್ರಮ ಅ. 20ರಂದು ಸಂಜೆ 7 ಗಂಟೆಗೆ ನಡೆಯಲಿದೆ.

. . . . . . . . .

ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪುರಸ್ಕೃತ, ರಾಷ್ಟ್ರಮಟ್ಟದ ‘ಯೂನಿವರ್ಸಲ್ ಐಡಲ್’ ಸ್ಪರ್ಧೆಗೆ ಆಯ್ಕೆಯಾದ ಹಾಗೂ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಅಶ್ವಿಜ್ ಅತ್ರೇಯ ಅವರು ಬಹುಮುಖ ಪ್ರತಿಭೆಯ ಬಾಲ ಕಲಾವಿದರಾಗಿದ್ದಾರೆ. ತಮ್ಮ ಸಂಗೀತ ಪ್ರತಿಭೆಯ ಮೂಲಕ ಮೈಸೂರು ದಸರಾ ವೇದಿಕೆಯಲ್ಲಿ ಸುಳ್ಯದ ಹೆಸರನ್ನು ಪ್ರತಿನಿಧಿಸಲಿದ್ದಾರೆ.

. . . . . . .

ಅಶ್ವಿಜ್ ಅವರು ಡಾ. ಕಿರಣ್ ಕುಮಾರ್ ಗಾನಸಿರಿ, ಹರ್ಷ ಎಂ.ಆರ್. (ಮೈಸೂರು), ವಿದುಷಿ ಕಾಂಚನ ಈಶ್ವರ್ ಭಟ್, ಅಶ್ವಿನಿ ಟಿ.ಎನ್. ಹಾಗೂ ಲಕ್ಷ್ಮಿ ಎಸ್. (ಪುತ್ತೂರು) ಅವರಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.

ಸುಳ್ಯದ ಪ್ರಭು ಬುಕ್ ಸೆಂಟರ್ ಮಾಲಕರಾದ ರಾಮಚಂದ್ರ ಜಿ.ಎಸ್. ಮತ್ತು ಉಷಾ ಕುಮಾರಿ ದಂಪತಿಯ ಪುತ್ರನಾಗಿರುವ ಅಶ್ವಿಜ್, ಸುಳ್ಯದ ಸಂತ ಜೋಸೆಫ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸುಳ್ಯದ ಪಲ್ಲವಿ ಜೆ.ಎಚ್., ಪ್ರಮೀತ್ ಜೆ.ಕೆ. ರೈ ಹಾಗೂ ಚೆಂಡೆ ವಾದನದಲ್ಲಿ ಅಭವ್ ಯು. ಗೌಡ ಪೈಚಾರ್ ತಂಡದೊಂದಿಗೆ ಭಾಗವಹಿಸಲಿದ್ದಾರೆ.

ಮೈಸೂರು ದಸರಾ ನವರಾತ್ರಿ ಉತ್ಸವದ ವೇದಿಕೆಯಲ್ಲಿ ಸುಳ್ಯದ ಯುವ ಪ್ರತಿಭೆಗಳು ಸಂಗೀತದ ಮೂಲಕ ತಮ್ಮ ಕಲೆಯನ್ನು ಅನಾವರಣಗೊಳಿಸಲಿರುವುದು ವಿಶೇಷವಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading