ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಅ.18 ರಂದು “ತುಲಾ ಸಂಕ್ರಮಣ ತೀರ್ಥಸ್ನಾನ” ; ಅ.20 ರಂದು “ನವಾನ್ನ ಭೋಜನ, ದುರ್ಗಾಪೂಜೆ” ಹಾಗೂ “ಆಯುಧಪೂಜೆ”

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಅ.18 ಆದಿತ್ಯವಾರದಂದು ಬೆಳಿಗ್ಗೆ 6:22ಕ್ಕೆ ಸರಿಯಾಗಿ ವೃಷಭ ಲಗ್ನದಲ್ಲಿ “ತುಲಾ ಸಂಕ್ರಮಣ ತೀರ್ಥಸ್ನಾನ” ನೆರವೇರಲಿದೆ.
ಅ.20 ಮಂಗಳವಾರದಂದು ಬೆಳಿಗ್ಗೆ 8:00 ಗಂಟೆಗೆ “ತೆನೆ ಕಟ್ಟುವುದು” ಮತ್ತು ಮದ್ಯಾಹ್ನ “ನವಾನ್ನ ಭೋಜನ” ನಡೆಯಲಿದ್ದು, ಬೆಳಿಗ್ಗೆ 8:30 ರಿಂದ ನಿರಂತರ ಮದ್ಯಾಹ್ನದ ತನಕ ಹಾಗೂ ಸಾಯಂಕಾಲ ಮತ್ತು ರಾತ್ರಿ 8:30 ರವರೆಗೆ ಆಯುಧಪೂಜೆ ನಡೆಯಲಿದೆ. ರಾತ್ರಿ 7:00 ಗಂಟೆಯಿಂದ “ದುರ್ಗಾಪೂಜೆ” ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading