ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಾನಡ್ಕ ಸ.ಕಿ.ಪ್ರಾ ಶಾಲೆಗೆ ರೋಟರಿ ಕ್ಲಬ್ ನಿಂದ ಕೊಡುಗೆಗಳ ಹಸ್ತಾಂತರ

ಸುಬ್ರಹ್ಮಣ್ಯ ಅಕ್ಟೋಬರ್ 17 : “ಸಮಾಜ ಸೇವೆಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿ, ಬಡವರ ಪಾಲಿನ ಆಶಾಕಿರಣವಾಗಿ, ಅಶಕ್ತರ ಬಾಳಿಗೆ ಬೆಳಕಾಗಿ, ದೀನ-ದಲಿತರಿಗೆ ನೆರವಾಗಿ, ನಿರಂತರ ಸಮಾಜಸೇವೆಯನ್ನು ಮಾಡುತ್ತಾ ಬಂದಿರುವ ರೋಟರಿ ಕ್ಲಬ್ ಅಗತ್ಯವಿರುವ ಸಂಘ ಸಂಸ್ಥೆಗಳಿಗೆ ಕೊಡುಗೆಗಳನ್ನು ಕೂಡ ನೀಡುತ್ತಾ ಬಂದಿದೆ”ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋಹಿತ್ ಬಿ.ಬಿ ಹೇಳಿದರು. ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ತುರುವೇಕೆರೆ, ರೋಟರಿ ಕ್ಲಬ್ ಬೆಂಗಳೂರು, ಜಾಲಹಳ್ಳಿ ರೋಟರಿ ಕ್ಲಬ್ ಹಾಗ ಗೂ ಬೆಂಗಳೂರು ಅನಿಕೇತನ ರೋಟರಿ ಕ್ಲಬ್ ಗಳ ಸಂಯುಕ್ತ ಆಶ್ರಯದಲ್ಲಿ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಂಪ್ಯೂಟರ್ ಹಾಗೂ ಏನೇಕಲ್ಲು ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆಯನ್ನು ಹಸ್ತಾಂತರಿಸಿ ಮಾತನಾಡಿದರು. ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸೌರಭ್ ಹಾಗೂ ಸಿಬ್ಬಂದಿವರ್ಗದವರು ಕಂಪ್ಯೂಟರ್ ಅನ್ನು ಸ್ವೀಕರಿಸಿದರು.

. . . . . . . . .

ಹಾಗೆಯೇ ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಸದಸ್ಯರುಗಳಿಗೆ ಸ್ಮಾರ್ಟ್ ಟಿವಿಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ತುರುವೇಕೆರೆ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಡಿ, ನಿಕಟ ಪೂರ್ವ ಅಧ್ಯಕ್ಷ ಉಮೇಶ್ , ನಿಯೋಜಿತ ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ಮೇಘ, ಬೆಂಗಳೂರು ರೋಟರಿ ಜಾಲಹಳ್ಳಿಯ ನಿಕಟಪೂರ್ವ ಅಧ್ಯಕ್ಷ ರಮಣಿ ಉಪ್ಪಲ್, ಬೆಂಗಳೂರು ಅನಿಕೇತನ ರೋಟರಿ ಕ್ಲಬ್ ಅಧ್ಯಕ್ಷ ಶಿವಗಂಗಯ್ಯ, ವಲಯ 5ರ ಸೇನಾಧಿಕಾರಿ ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಜಯಪ್ರಕಾಶ್, ಪ್ರಶಾಂತ್, ಸೀತಾರಾಮ, ರಾಮಕೃಷ್ಣ, ವಿಜಯಕುಮಾರ್, ಉಮೇಶ್, ರವಿ ಕಕ್ಕೆಪದವು, ಗೋಪಾಲ್, ಮೈಲಪ್ಪ, ಭವಾನಿ ಶಂಕರ್ ಹಾಗೂ ಗಿರಿಧರ್ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading