ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸುಬ್ರಹ್ಮಣ್ಯದ ಎಸ್‌.ಎಸ್‌.ಪಿ.ಯು ಕಾಲೇಜಿನ ಎನ್‌.ಎಸ್‌.ಎಸ್ ವಾರ್ಷಿಕ ವಿಶೇಷ ಶಿಬಿರ ; “ಯುವ ಜನಾಂಗದ ಮೌಲ್ಯಯುತ ಬದುಕಿಗೆ ಎನ್‌.ಎಸ್.ಎಸ್ ರಹದಾರಿ” : ಜಯಸೂರ್ಯ ರೈ ಮಾದೋಡಿ ಅಭಿಮತ

ಸುಬ್ರಹ್ಮಣ್ಯ : “ಯುವ ವಿದ್ಯಾರ್ಥಿಗಳ ಮೌಲ್ಯಯುತ ಬದುಕಿಗೆ ಎನ್.ಎಸ್.ಎಸ್ ರಹದಾರಿಯಾಗಿದೆ. ಸೇವೆಯಿಂದ ಆನಂದವನ್ನು ಪಡೆಯಬಹುದೆಂಬ ಜ್ಞಾನವನ್ನು ಇದು ನೀಡುವ ಕಾರಣ ಈ ಸಂಸ್ಥೆ ವಿದ್ಯಾರ್ಥಿ ದೆಸೆಯಿಂದಲೇ ಜೀವನ ಪಾಠ ಕಲಿಸುತ್ತದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಭೂಷಣವಾಗಿದೆ. ವಿದ್ಯೆ ಅನ್ನುವುದು ಜೀವನದ ಪ್ರಗತಿಗೆ ಮೆಟ್ಟಿಲು ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಅತ್ಯವಶ್ಯಕ. ಇದರೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಚ ಪರಿಸರದ ಅನುಷ್ಠಾನವು ಅತ್ಯಗತ್ಯ ಎನ್ನುವ ಜ್ಞಾನವು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು” ಎಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು. ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡ ಸುಬ್ರಹ್ಮಣ್ಯದ ಎಸ್‌.ಎಸ್‌.ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. “ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕು. ಅರಣ್ಯ ಸಮೃದ್ಧಿಯಿಂದ ಆರೋಗ್ಯಪೂರ್ಣ ನಾಳೆಗಳು ನಮಗೆ ದೊರಕುತ್ತದೆ ಎಂಬ ಜಾಗೃತಿಯನ್ನು ವಿದ್ಯಾರ್ಥಿಗಳು ಇತರರಲ್ಲಿ ಮೂಡಿಸಬೇಕು” ಎಂದರು.

. . . . . . . . .

ಸುಬ್ರಹ್ಮಣ್ಯದ ಎಸ್‌.ಎಸ್‌.ಪಿ.ಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಎಸ್‌.ಎಸ್‌.ಪಿ.ಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗುಣವರ್ದನ ಕೆದಿಲ, ಸದಸ್ಯರಾದ ಭವ್ಯಾಕುಮಾರಿ, ರಾಧಾಕೃಷ್ಣ ಪರಮಲೆ, ಪ್ರಮುಖರಾದ ವಸಂತ ರೈ ಕಾರ್ಕಳ, ನಾಗೇಶ್ ರೈ ಮಾಳ ಮುಖ್ಯಅತಿಥಿಗಳಾಗಿದ್ದರು. ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ಪೂರ್ಣಿಮಾ, ಎನ್ ಎಸ್ ಎಸ್ ನಾಯಕರಾದ ಅಭಿಲಾಷ್, ಸುದೀಕ್ಷಾ.ಡಿ.ಕುಂದರ್, ಚಿಂತನ್, ರಚನಾ ಟಿ ವೇದಿಕೆಯಲ್ಲಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading