ಅ.31, ನ.01 ರಂಗಮನೆಯಲ್ಲಿ ಶಾಸ್ತ್ರೀಯ ಸಂಗೀತೋತ್ಸವ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ರಂಗಮನೆಯ ಬೆಳ್ಳಿ ವರ್ಷದ ಪ್ರಯುಕ್ತ , ಅಕ್ಟೋಬರ್ 31 ಮತ್ತು ನವಂಬರ್ 01 ರಂದು ಸಂಜೆ 6.00 ರಿಂದ ರಾತ್ರಿ 8.30 ರ ವರೆಗೆ ಶಾಸ್ತ್ರೀಯ ಸಂಗೀತೋತ್ಸವವನ್ನು ಏರ್ಪಡಿಸಲಾಗಿದೆ.

. . . . . . . . .

ಅ.31 ರಂದು ಶನಿವಾರ ಸಂಗೀತೋತ್ಸವವಕ್ಕೆ ಪ್ರಗತಿಪರ ಕೃಷಿಕರಾದ ಆನೆಕಾರ ಗಣಪಯ್ಯನವರು ದೀಪಪ್ರಜ್ವಲನ ಮಾಡಿ ಚಾಲನೆ ನೀಡಲಿದ್ದಾರೆ. ಬಳಿಕ ಮಂಗಳೂರಿನ ಕು| ಮೇಧಾ ಜಿ.ಭಟ್ ಇವರಿಂದ ವೈಯ್ಯಕ್ತಿಕ ಹಿಂದೂಸ್ತಾನೀ ಹಾರ್ಮೋನಿಯಂ ವಾದನ ನಂತರದಲ್ಲಿ ಕು| ನೀಹಾರಿಕಾ ದೇರಾಜೆ ಇವರಿಂದ
ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ.
ತಬಲಾದಲ್ಲಿ ಭಾರವೀ ದೇರಾಜೆ ಹಾಗೂ ತಂಬೂರಾದಲ್ಲಿ ಕು| ಸಂವೇಧಾ ಜಿ.ಭಟ್ ಸಾಂಗತ್ಯ ನೀಡಲಿದ್ದಾರೆ.

. . . . . . .

ನ. 01 ರಂದು ಭಾನುವಾರ ಎರಡನೇ ದಿನದ ಸಂಗೀತೋತ್ಸವಕ್ಕೆ ಹಿರಿಯ ಸಂಗೀತ ಗುರುಗಳಾದ ವಿದುಷಿ ಶಂಕರಿಮೂರ್ತಿ ಬಾಳಿಲ ಇವರು ದೀಪಪ್ರಜ್ವಲನೆ ಮಾಡಲಿದ್ದಾರೆ. ಬಳಿಕ ವಿದ್ವಾನ್ ವಿವೇಕ್ ಸದಾಶಿವಂ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ವಯಲಿನ್ ನಲ್ಲಿ ಅಲಂಕೋಡು ವಿ.ಎಸ್.ಗೋಕುಲ್, ಮೃದಂಗದಲ್ಲಿ ಬಿ.ಎಸ್.ಪ್ರಶಾಂತ್ ಬೆಂಗಳೂರು ಹಾಗೂ ಘಟಂ ನಲ್ಲಿ ಶಮಿತ್ ಗೌಡ ಬೆಂಗಳೂರು ಇವರು ಸಾಂಗತ್ಯ ನೀಡಲಿದ್ದಾರೆ.
ರಂಗಮನೆಯ ಅಡಿಟೋರಿಯಂನಲ್ಲಿ ಸಮಯಕ್ಕೆ ಸರಿಯಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ ಮತ್ತು ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷರಾದ ಜೀವನ್ ರಾಂ ಸುಳ್ಯ ಹಾಗೂ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ವಕೀಲರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading