ವಳಲಂಬೆ : ನವರಾತ್ರಿ ಉತ್ಸವ ಅಂಗವಾಗಿ ಸಾಮೂಹಿಕ ಚಂಡಿಕಾ ಹೋಮ ಹಾಗೂ ನವಾನ್ನ ಭೋಜನ

ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅ.15ರಂದು ಲಲಿತ ಪಂಚಮಿಯಂದು ದೇವಸ್ಥಾನದಲ್ಲಿ ಕದಿರು ಕಟ್ಟುವುದು, ಕದಿರು ವಿತರಣೆ, ಸಾಮೂಹಿಕ ಚಂಡಿಕಾ ಹೋಮ ಹಾಗೂ ನವಾನ್ನ ಭೋಜನ ನಡೆಯಲಿದೆ.ಅ.18, 19 ಮತ್ತು 20ರಂದು ಸಂಜೆ 5.30ರಿಂದ ಸಾಮೂಹಿಕ ದುರ್ಗಾಪೂಜೆ ಜರಗಲಿದೆ. ಅ.20ರಂದು ಮಂಗಳವಾರ ಬೆಳಿಗ್ಗೆ 8.30ರಿಂದ ವಾಹನ ಪೂಜೆ ಹಾಗೂ ಆಯುಧ ಪೂಜೆ ನಡೆಯಲಿದೆ. ಅ.21ರಂದು ವಿಜಯದಶಮಿಯ ಪ್ರಯುಕ್ತ ಅಕ್ಷರಾಭ್ಯಾಸ ಕಾರ್ಯಕ್ರಮ ಜರಗಲಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಅವರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading