ಕುಲ್ಕುಂದ ಬಸವೇಶ್ವರ ದೇವಾಲಯದಲ್ಲಿ ನವಾನ್ನ ಭೋಜನ : 2,500ಕ್ಕೂ ಮಿಕ್ಕಿ ಭಕ್ತರಿಂದ ಪ್ರಸಾದ ಸ್ವೀಕಾರ

ಸುಬ್ರಹ್ಮಣ್ಯ (ಅಕ್ಟೋಬರ್ 14): ಇತಿಹಾಸ ಪ್ರಸಿದ್ಧ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ 2026 ನೇ ಸಾಲಿನ ಹೊಸರೋಗಣೆ (ನವಾನ್ನ) ಕಾರ್ಯಕ್ರಮದಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಮಿಕ್ಕಿ ಭಕ್ತರು ಹೊಸ ಅಕ್ಕಿ ಭೋಜನವನ್ನು ಸವಿದರು. 21 ಬಗೆಯ ವಿವಿಧ ಖಾದ್ಯಗಳನ್ನು ಒಳಗೊಂಡ ಭೋಜನದ ಸವಿಯನ್ನು ಭಕ್ತರು ಪಡೆದುಕೊಂಡರು. ಭೋಜನಕ್ಕಾಗಿ ದೇವಳದ ಮುಂಭಾಗದಲ್ಲಿ ಹಿಂದಿನ ಸಂಪ್ರದಾಯದಂತೆ ಸಗಣಿ ಸಾರಿಸಿದ ನೆಲದಲ್ಲಿ ಭಕ್ತರು ಕುಳಿತು ಊಟ ಮಾಡಿದರು. ಹಾಗೆಯೇ ನೂತನವಾಗಿ ನಿರ್ಮಿಸಲಾದ ಸಭಾಂಗಣದಲ್ಲಿ 1,500ಕ್ಕೂ ಅಧಿಕ ಭಕ್ತರು ಕೂತು ಟೇಬಲ್ ವ್ಯವಸ್ಥೆಯೊಂದಿಗೆ ಭೋಜನವನ್ನು ಸವಿದರು.
ಶ್ರೀ ದೇವಳದಲ್ಲಿ ಬೆಳಿಗ್ಗೆ ಸ್ಥಳೀಯ ಹಾಗೂ ಊರಿನ ಭಕ್ತರು ಬಂದು ತೆನೆಯನ್ನು ಸ್ವೀಕರಿಸಿ ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದರು. ಮಧ್ಯಾಹ್ನದ ಮಹಾಪೂಜೆಯ ನಂತರ ಭಕ್ತರು ತೀರ್ಥಪ್ರಸಾದ ಸ್ವೀಕರಿಸಿ, ವ್ಯವಸ್ಥಿತವಾಗಿ ಏರ್ಪಡಿಸಲಾದ ಸ್ಥಳದಲ್ಲಿ ಕೂತು ಭೋಜನ ಪ್ರಸಾದವನ್ನು ಸ್ವೀಕರಿಸಿದರು. ಈ ಎಲ್ಲಾ ವ್ಯವಸ್ಥೆಗಳನ್ನು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಟ್ರಸ್ಟ್, ಭಜನಾ ಸಮಿತಿ, ವರಮಹಾಲಕ್ಷ್ಮಿ ಸಮಿತಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮಂಗಳವಾರ ರಾತ್ರಿಯಿಂದಲೇ ದುಡಿದು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading