ಸುಳ್ಯ ತಾಲೂಕು ಪಂಚಾಯತ್‌ನ 11 ಕ್ಷೇತ್ರ ಹಾಗೂ 3 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೂ ಮೀಸಲಾತಿ ನಿಗದಿ – ಕ್ಷೇತ್ರವಾರು ಮೀಸಲಾತಿ ವಿವರ ಇಲ್ಲಿದೆ

ಸುಳ್ಯ: ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿ ಅಧಿಸೂಚನೆ ಹೊರಡಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ ಈ ಬಾರಿ ಅರಂತೋಡು ಒಂದು ಕ್ಷೇತ್ರ ಕಡಿತಗೊಂಡು ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ 11 ತಾಲೂಕು ಪಂಚಾಯತ್ ಕ್ಷೇತ್ರಗಳಿವೆ.

. . . . . . . . .

ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ
ಸುಳ್ಯ ತಾಲೂಕಿನ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ ಬೆಳ್ಳಾರೆ ಕ್ಷೇತ್ರವನ್ನು ಸಾಮಾನ್ಯ ಮಹಿಳೆ, ಜಾಲ್ಲೂರು ಕ್ಷೇತ್ರವನ್ನು ಸಾಮಾನ್ಯ ಹಾಗೂ ಗುತ್ತಿಗಾರು ಕ್ಷೇತ್ರವನ್ನು ಹಿಂದುಳಿದ ವರ್ಗ ಎ ವಿಭಾಗಕ್ಕೆ ಮೀಸಲಿಡಲಾಗಿದೆ.

ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ
ಸುಳ್ಯ ತಾಲೂಕು ಪಂಚಾಯತ್‌ನ 11 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಸಾಮಾನ್ಯ ವರ್ಗಕ್ಕೆ ಆರು ಸ್ಥಾನಗಳು (ಮೂರು ಮಹಿಳೆಯರು), ಅನುಸೂಚಿತ ಜಾತಿಗೆ ಎರಡು ಸ್ಥಾನಗಳು (ಒಂದು ಮಹಿಳೆ), ಅನುಸೂಚಿತ ಪಂಗಡಕ್ಕೆ ಒಂದು ಸ್ಥಾನ (ಮಹಿಳೆ) ಹಾಗೂ ಹಿಂದುಳಿದ ವರ್ಗ ಎ ವಿಭಾಗಕ್ಕೆ ಎರಡು ಸ್ಥಾನಗಳು (ಒಂದು ಮಹಿಳೆ) ಮೀಸಲಾಗಿವೆ.

. . . . . . .

ಕ್ಷೇತ್ರವಾರು ಮೀಸಲಾತಿ ವಿವರ ಹೀಗಿದೆ:
1. ಬೆಳ್ಳಾರೆ – ಅನುಸೂಚಿತ ಜಾತಿ
2. ಬಾಳಿಲ – ಸಾಮಾನ್ಯ ಮಹಿಳೆ
3. ಐವರ್ನಾಡು – ಸಾಮಾನ್ಯ
4. ಜಾಲ್ಲೂರು – ಸಾಮಾನ್ಯ ಮಹಿಳೆ
5. ಅಜ್ಜಾವರ – ಅನುಸೂಚಿತ ಜಾತಿ ಮಹಿಳೆ
6. ಆಲೆಟ್ಟಿ – ಅನುಸೂಚಿತ ಪಂಗಡ ಮಹಿಳೆ
7. ಅರಂತೋಡು – ಹಿಂದುಳಿದ ವರ್ಗ ಎ ಮಹಿಳೆ
8. ಮಡಪ್ಪಾಡಿ – ಸಾಮಾನ್ಯ
9. ನೆಲ್ಲೂರು ಕೆಮ್ರಾಜೆ – ಸಾಮಾನ್ಯ ಮಹಿಳೆ
10. ಗುತ್ತಿಗಾರು – ಹಿಂದುಳಿದ ವರ್ಗ ಎ
11. ಪಂಜ – ಸಾಮಾನ್ಯ

ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ
ಪ್ರಕಟಿತ ಮೀಸಲಾತಿ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅಧಿಸೂಚನೆ ಪ್ರಕಟಿಸಿದ ದಿನದಿಂದ 10 ದಿನಗಳ ಒಳಗಾಗಿ, ಅಂದರೆ ಅಕ್ಟೋಬರ್ 19ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading