ನ.29ರಂದು ಏನೆಕಲ್‌ನಲ್ಲಿ ‘ಡಿ-ಜೋ-ಡಿ ಕೋಸ್ಟಲ್ ಕರ್ನಾಟಕ’ ನೃತ್ಯ ಸ್ಪರ್ಧೆ – 10 ರಿಂದ 16 ವರ್ಷದೊಳಗಿನ ಜೋಡಿಗಳಿಗೆ ಅವಕಾಶ – ಪ್ರಥಮ ಸುತ್ತಿನ ವಿಡಿಯೋ ಕಳುಹಿಸಲು ನ.1 ಕೊನೆಯ ದಿನ

ಸುಳ್ಯ: ಕಲಾಮಾಯೆ (ರಿ) ಯೇನೆಕಲ್ ವತಿಯಿಂದ ‘ಡಿ-ಜೋ-ಡಿ ಕೋಸ್ಟಲ್ ಕರ್ನಾಟಕ – ಜೋಡಿ ನೃತ್ಯ ಸ್ಪರ್ಧೆ 2026’ ಆಯೋಜಿಸಲಾಗಿದೆ. ಸ್ಪರ್ಧೆಯ ಅಂತಿಮ ಸುತ್ತು ನವೆಂಬರ್ 29ರ ಭಾನುವಾರ ಸಂಜೆ 6.45ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಯೇನೆಕಲ್‌ನ ಅರ್ಪಣಾ ಕ್ರೀಡಾಂಗಣದ ತೆರೆದ ವೇದಿಕೆಯಲ್ಲಿ ನಡೆಯಲಿದೆ.

. . . . . . . . .

ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದ್ದು, 10ರಿಂದ 16 ವರ್ಷದೊಳಗಿನ ಜೋಡಿ ಸ್ಪರ್ಧಿಗಳು ಭಾಗವಹಿಸಬಹುದು. ಸ್ಪರ್ಧಿಗಳು ಯಾವುದೇ ಭಾಷೆಯ, ಯಾವುದೇ ಶೈಲಿಯ ನೃತ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಮೊದಲ ಸುತ್ತಿನಲ್ಲಿ ಭಾಗವಹಿಸಲು ಸ್ಪರ್ಧಿಗಳು ಒಂದೂವರೆ ನಿಮಿಷದ ನೃತ್ಯದ ವಿಡಿಯೋವನ್ನು ನವೆಂಬರ್ 1ರೊಳಗೆ ಕಳುಹಿಸಿಕೊಡಬೇಕು. ವಿಡಿಯೋದಲ್ಲಿ ಯಾವುದೇ ತಾಂತ್ರಿಕ ಸಂಕಲನಕ್ಕೆ ಅವಕಾಶವಿರುವುದಿಲ್ಲ.ಮೊದಲ ಸುತ್ತಿನಲ್ಲಿ ಭಾಗವಹಿಸಿದ ಜೋಡಿಗಳ ಪೈಕಿ 10 ಜೋಡಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಂತಿಮ ಸ್ಪರ್ಧೆಯು ಸುಸಜ್ಜಿತ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೊಂದಿಗೆ ನಡೆಯಲಿದೆ.

. . . . . . .

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಜೋಡಿಗಳು ‘ಡಿ-ಜೋ-ಡಿ ಕೋಸ್ಟಲ್ ಕರ್ನಾಟಕ’ ಟ್ರೋಫಿ ಮತ್ತು ಪ್ರಮಾಣಪತ್ರವನ್ನು ಪಡೆಯಲಿದ್ದಾರೆ. ಅಂತಿಮ ಸುತ್ತಿನಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.ಸ್ಪರ್ಧಿಗಳ ವಯಸ್ಸಿನ ದೃಢೀಕರಣಕ್ಕಾಗಿ ಜನ್ಮ ದಿನಾಂಕದ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9686714517 ಕರೆ ಮಾಡಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading