ಆರೇ ತಿಂಗಳಲ್ಲಿ ಕೈಕೊಟ್ಟ ಭೂಗತ ಕೇಬಲ್‌: ಕೌಡಿಚಾರ್‌ನಲ್ಲಿ ಮರ ಬಿದ್ದು ಕಂಬಗಳಿಗೆ ಹಾನಿ ; ಎರಡು ಕಡೆಯಿಂದ ವಿದ್ಯುತ್ ಸರಬರಾಜು ಇಲ್ಲದೇ ಕತ್ತಲಲ್ಲಿ ಸುಳ್ಯ!

ಸುದೀಪ್ ರಾಜ್ ಮುಳ್ಯ

. . . . . . . . .

ಸುಳ್ಯ: ಮಳೆ-ಗಾಳಿಗೆ ಪದೇಪದೆ ವಿದ್ಯುತ್‌ ಕಡಿತವಾಗುವುದನ್ನು ತಪ್ಪಿಸಿ ಸುಳ್ಯಕ್ಕೆ ನಿರಂತರ ವಿದ್ಯುತ್‌ ಕಲ್ಪಿಸುವ ಉದ್ದೇಶದಿಂದ ಕೋಟಿಗಟ್ಟಲೆ ವೆಚ್ಚದಲ್ಲಿ ಅಳವಡಿಸಲಾಗಿದ್ದ 33 ಕೆ.ವಿ ಸಾಮರ್ಥ್ಯದ ಭೂಗತ ಕೇಬಲ್‌ ಆರೇ ತಿಂಗಳಲ್ಲಿ  ಕೈಕೊಟ್ಟಿದೆ! ಇತ್ತ ಮಾಡಾವು ಕಾವು ವಿದ್ಯುತ್‌ ಲೈನ್‌ಗೆ ಮರ ಬಿದ್ದು ಕಂಬಗಳು ಮುರಿದುಬಿದ್ದಿದ್ದರೆ, ಅತ್ತ ಪರ್ಯಾಯವಾಗಬೇಕಿದ್ದ ಭೂಗತ ಮಾರ್ಗವೂ ಕೆಟ್ಟು ನಿಂತು ಸುಳ್ಯ ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಭಾಗಗಳು ಸಂಪೂರ್ಣ ಕತ್ತಲೆಲ್ಲಿ ಮುಳುಗಿವೆ. ಮೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

. . . . . . .

​ಕೌಡಿಚಾರ್‌ನಲ್ಲಿ ಕಂಬಗಳಿಗೆ ಹಾನಿ
ಶುಕ್ರವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ  ಕೌಡಿಚಾರ್‌ ಸಮೀಪ ಮಾರ್ಗದ ಮೇಲೆ ಬೃಹತ್‌ ಮರ ಬಿದ್ದ ಪರಿಣಾಮ ಎರಡು ವಿದ್ಯುತ್‌ ಕಂಬಗಳು ಮುರಿದು ಬಿದ್ದು ಲೈನ್‌ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಭೂಗತ ಕೇಬಲ್ ಅಳವಡಿಕೆಯಲ್ಲಿ​ ಕಳಪೆ ಕಾಮಗಾರಿ ಶಂಕೆ

ಮಾಮೂಲಿ ವಿದ್ಯುತ್ ಸರಬರಾಜು ಆಗುವ ಲೈನ್‌ನಲ್ಲಿ ಸಮಸ್ಯೆ ತಲೆದೋರಿದಾಗ ಪರ್ಯಾಯವಾಗಿ ಬಳಸಲೆಂದೇ ಬೆಳ್ಳಾರೆಯಿಂದ ಸುಳ್ಯದವರೆಗೆ ೩೩ ಕೆ.ವಿ ಭೂಗತ ಕೇಬಲ್‌ ಅಳವಡಿಸಲಾಗಿತ್ತು. ಆದರೆ ಕಾಮಗಾರಿ ಮುಗಿದು ಆರು ತಿಂಗಳು ಕಳೆಯುವುದರೊಳಗೆ ಈ ಭೂಗತ ಕೇಬಲ್‌ ಕೆಟ್ಟು ನಿಂತಿದೆ. ತಿಂಗಳ ಹಿಂದೆಯೇ ಇದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರೂ ಮೆಸ್ಕಾಂ ಅಧಿಕಾರಿಗಳು ದುರಸ್ತಿಗೆ ಮುಂದಾಗದೆ ಜಾಣ ಮೌನ ವಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅಳವಡಿಸಿದ ಕೆಲವೇ ತಿಂಗಳಲ್ಲಿ ಕೇಬಲ್‌ ನಿಷ್ಕ್ರಿಯಗೊಂಡಿರುವುದು ಕಳಪೆ ಕಾಮಗಾರಿಯ ಶಂಕೆಗೆ ಎಡೆಮಾಡಿಕೊಟ್ಟಿದೆ.
ಅಧಿಕಾರಿಗಳು ಮೊದಲೇ ಎಚ್ಚೆತ್ತು ಭೂಗತ ಕೇಬಲ್ ಸರಿಪಡಿಸಿದ್ದರೆ ಸುಳ್ಯದ ಜನರಿಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.

​ದುರಸ್ತಿಗೆ ಸಿದ್ಧತೆ ನಡೆದಿದೆ
“ಬೆಳ್ಳಾರೆ-ಸುಳ್ಯ ನಡುವಿನ ಭೂಗತ ಕೇಬಲ್‌ ಕಳೆದ ಕೆಲ ದಿನಗಳಿಂದ ಹಾಳಾಗಿರುವುದು ಗಮನಕ್ಕೆ ಬಂದಿದೆ. ಅದನ್ನು ಶೀಘ್ರವೇ ದುರಸ್ತಿಪಡಿಸಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಆದಷ್ಟು ಬೇಗ ಭೂಗತ ಕೇಬಲ್ ವಿದ್ಯುತ್‌ ಸಂಪರ್ಕವನ್ನು ಸಹಜ ಸ್ಥಿತಿಗೆ ತರಲಾಗುವುದು.”
— ರಾಮಚಂದ್ರ ಕಾರ್ಯನಿರ್ವಾಹಕ ಎಂಜಿನಿಯರ್ (EE), ಮೆಸ್ಕಾಂ ಪುತ್ರೂರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading