ದಿವಂಗತ ಭೀಮಗುಳಿ ( ಬಾಬ್ಲುಬೆಟ್ಟು) ಪುಟ್ಡಣ್ಣ ಗೌಡರಿಗೆ ನುಡಿನಮನ

ಒಕ್ಕಲಿಗ ಸಮುದಾಯದ ಪ್ರತಿಷ್ಠಿತ ಭೀಮಗುಳಿ–ಬಾಬ್ಲುಬೆಟ್ಟು ಮನೆತನದ ಕುಡಿ ಹಾಗೂ ಮುಂಡೋಡಿ ಕುಟುಂಬದ ಅಳಿಯರಾಗಿದ್ದ ದಿವಂಗತ ಪುಟ್ಟಣ್ಣ ಗೌಡರು ಶ್ರಮಜೀವಿಯಾಗಿದ್ದರು. ಶಾಲೆಯಲ್ಲಿ ಕಲಿತದ್ದಕ್ಕಿಂತ ಬದುಕಿನ ಶಾಲೆಯಲ್ಲಿ ಕಲಿತದ್ದು ಅಪಾರ. ಅನುಭವವೇ ಅವರ ವಿಶ್ವವಿದ್ಯಾಲಯವಾಗಿತ್ತು. ಶ್ರಮವೇ ಅವರ ಸಂಪತ್ತು, ಪ್ರಾಮಾಣಿಕತೆಯೇ ಅವರ ಆಸ್ತಿಯಾಗಿತ್ತು ಎಂದು ನಿವೃತ್ತ ಮುಖ್ಯಶಿಕ್ಷಕಿ ತಾರಾಮತಿ ಕಜ್ಜೋಡಿ ಹೇಳಿದರು.

. . . . . . . . .

ಇತ್ತೀಚೆಗೆ ನಿಧನರಾದ ಪುಟ್ಟಣ್ಣ ಗೌಡ ಭೀಮಗುಳಿ ಅವರಿಗೆ
ಗುತ್ತಿಗಾರು ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.
ಬಾಲ್ಯದಿಂದಲೇ ಕಠಿಣ ಪರಿಶ್ರಮಕ್ಕೆ ಹೆಸರಾಗಿದ್ದ ಪುಟ್ಟಣ್ಣ ಗೌಡರು ಕಷ್ಟದ ದಿನಗಳಲ್ಲಿಯೂ ಮಕ್ಕಳ ಭವಿಷ್ಯದ ಕನಸನ್ನು ಬಡತನದ ಮುಂದೆ ಸೋಲಿಸಲಿಲ್ಲ. ತಮ್ಮ ಮೂವರು ಪುತ್ರರಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡಿ, ಸಮಾಜ ಮೆಚ್ಚುವ ವ್ಯಕ್ತಿಗಳನ್ನಾಗಿ ಬೆಳೆಸಿದರು.ಸಮಾಜದ ಆಸ್ತಿಯನ್ಮಾಗಿಸಿದರು. ಪುತ್ರರು ಕಲೆ, ಸಾಹಿತ್ಯ, ಕ್ರೀಡೆ, ಯಕ್ಷಗಾನ, ನಾಟಕ ಸೇರಿದಂತೆ ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರತಿಭೆ ತೋರಿಸುತ್ತಿರುವುದು ಅವರು ನೀಡಿದ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ ಎಂದರು.
ದುರಾದೃಷ್ಟವಶಾತ್ ಅಲ್ಪಾವಧಿಯಲ್ಲೇ ಧರ್ಮಪತ್ನಿ ಹಾಗೂ ಹಿರಿಯ ಪುತ್ರನನ್ನು ಕಳೆದುಕೊಂಡ ನೋವು ಪುಟ್ಟಣ್ಣ ಗೌಡರನ್ನು ಅತಿಯಾಗಿ ಕಾಡಿತ್ತು. ಆದರೂ ಅವರು ಬದುಕಿನಲ್ಲಿ ಕಲಿಸಿಕೊಟ್ಟ ಮೌಲ್ಯಗಳು ಕುಟುಂಬದವರಿಗೆ ಸದಾ ದಾರಿದೀಪವಾಗಿವೆ. ಅವರು ಬಿಟ್ಟುಹೋದ ನೆನಪುಗಳು ಶಾಶ್ವತ ಸಂಪತ್ತಾಗಿದ್ದು, ಕಣ್ಣಿಗೆ ಕಾಣದಿದ್ದರೂ ಹೃದಯದಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮೃತರ ಹಿರಿಯ ಸಹೋದರ ತಮ್ಮಯ್ಯ ಗೌಡ ಬಾಬ್ಲುಬೆಟ್ಟು, ಮೃತರ ಪುತ್ರರಾದ ನಿತ್ಯಾನಂದ ಭೀಮಗುಳಿ, ಬಾಲಕೃಷ್ಣ ಭೀಮಗುಳಿ,ಸೊಸೆಯಂದಿರಾದ ಭವಾನಿನಾರಾಯಣ, ಚಿತ್ರಾವತಿನಿತ್ಯಾನಂದ,
ಧರ್ಮಪಾಲ ಮುಂಡೋಡಿ, ಚಿದಾನಂದ ಮುಂಡೋಡಿ, ಕೃಷ್ಣವೇಣಿ ಮುಂಡೋಡಿ, ರಾಜಮ್ಮ ಭೀಮಗುಳಿ, ಕಾರ್ಕಳ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ವಸಂತಸೇನ, ಸುಲೋಚನಾ ದಂಪತಿಗಳು, ಭೀಮಗುಳಿ ಕುಟುಂಸ್ಥರು, ಬಂಧುಗಳು, ಊರವರು ಉಪಸ್ಥಿತರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು.
ಅನಂತರಾಮ ಮಣಿಯಾನಮನೆ ಸ್ವಾಗತಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading