ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಮಟ್ಟದ “ಯುವ ರೆಡ್‌ಕ್ರಾಸ್ ಪ್ರೇರಣಾ ಶಿಬಿರ – 2026” – “ಮನಸ್ಸಿನಲ್ಲಿ ಅಪಾರವಾದ ಶಕ್ತಿಯನ್ನು ತಿಳಿಸುವ ಕೆಲಸ ಶಿಕ್ಷಣದ ಉದ್ದೇಶ” – ಡಾ.ಗಣನಾಥ ಯೆಕ್ಕಾರ್

ಸುಬ್ರಹ್ಮಣ್ಯ : “ಮನುಷ್ಯನ ಮನಸ್ಸಿನಲ್ಲಿ ಆಳವಾದ ಅಪಾರವಾದ ಶಕ್ತಿ ಇದೆ. ಆ ಶಕ್ತಿಯ ಅರಿವನ್ನು ತಿಳಿಸುವ ಕೆಲಸ ಶಿಕ್ಷಣದ ಉದ್ದೇಶವಾಗಿದೆ. ವಿದ್ಯಾರ್ಥಿಳ ಮನಸ್ಸಿನಲ್ಲಿರುವ ಆಗಾದ ಶಕ್ತಿಯನ್ನು ಪರಿಚಯಿಸುವ ಕೆಲಸ ಪ್ರೇರಣ ಶಿಬಿರ ಮಾಡುತ್ತದೆ” ಎಂದು ವೈಆರ್‌ಸಿ ರಾಜ್ಯ ಸಲಹೆಗಾರ ಪ್ರಧಾನ ಕಾರ್ಯದರ್ಶಿ ಉಡುಪಿ ಡಾ.ಗಣನಾಥ ಶೆಟ್ಟಿ ಯೆಕ್ಕಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

. . . . . . . . .

ಮಂಗಳೂರು ಯುವ ರೆಡ್ ಕ್ರಾಸ್ ವಿಶ್ವವಿದ್ಯಾಲಯ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಖೆ ಇದರ ವತಿಯಿಂದ ಅಕ್ಟೋಬರ್ 8ರಿಂದ10ರ ತನಕ ವಿಶ್ವವಿದ್ಯಾಲಯ ಮಟ್ಟದ “ಯುವ ರೆಡ್‌ಕ್ರಾಸ್ ಪ್ರೇರಣ ಶಿಬಿರ-2026” ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನಡೆಯಿತು.

. . . . . . .

ಎಂಯು, ವೈಆರ್‌ಸಿ ಸಲಹಾ ಸಮಿತಿ ರಾಜ್ಯ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಕುಮಾರ್, ಸುಳ್ಯ ತಾಲ್ಲೂಕು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಪಿ.ಬಿ ಸುಧಾಕರ್ ರೈ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ. ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಗಳೂರು ವಿಶ್ವವಿದ್ಯಾನಿಲಯ ವೈಆರ್‌ಸಿ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್ ಕಾರ್ಯಕ್ರಮವನ್ನು ಪ್ರಸ್ತಾಪಿಸಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸ್ ಕಾರ್ಡಿನೇಟರ್ ಪ್ರೊ. ಶ್ರೀಲತಾ ಕಮಿಲ, ಹಾಗೂ ಪ್ರೋಗ್ರಾಮ್ ಆಫೀಸರ್ ಶಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೋಗ್ರಾಮ್ ಆಫೀಸರ್ ಸ್ವಾತಿ ವಂದಿಸಿದರು.    

ಡಾ.ಜಿ ಶಂಕರ್ ಸಹಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಿಕೇತನ ಮತ್ತು ಡಾ.ಅನುರಾಧ ಕುರುಂಜಿ ಉಪಸ್ಥಿತರಿದ್ದರು. ಸಂಖ್ಯಾ ಹಾಗೂ ಪೃಥ್ವಿರಾಜ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರಿಂದ ಕಾಲೇಜಿಗೆ 200 ಸ್ಟೀಲ್ ಲೋಟಗಳನ್ನು ಹಸ್ತಾಂತರಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading