ಸುಬ್ರಹ್ಮಣ್ಯ : ಕೆ ಎಸ್ ಎಸ್ ಕಾಲೇಜಿನಲ್ಲಿ ಸುಳ್ಯ-ಕಡಬ ವಲಯ ಎನ್ಎಸ್ಎಸ್ ಘಟಕದ ಸಾಂಸ್ಕೃತಿಕ ಸ್ಪರ್ಧೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಎನ್ಎಸ್ಎಸ್ ಘಟಕ ಸಹಯೋಗದೊಂದಿಗೆ ಸುಳ್ಯ ಕಡಬ ವಲಯ ಎನ್ಎಸ್ಎಸ್ ಘಟಕದ ವೈಯಕ್ತಿಕ ನೃತ್ಯ ಹಾಗೂ ವೈಯಕ್ತಿಕ ಹಾಡು ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ ಪಿ.ಟಿ ಅಧ್ಯಕ್ಷತೆಯನ್ನು ವಹಿಸಿದರು. ಕೆ.ಎಸ್.ಎಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಮತ್ತು ಹಿರಿಯ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಪ್ರಸಾದ ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು ಕಲಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ಕಡಬ ವಲಯ ಎನ್ಎಸ್ಎಸ್ ಘಟಕದ ಸಂಯೋಜಕರು ಹಾಗೂ ನೆಹರು ಮೆಮೋರಿಯಲ್ ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಚಿತ್ರಲೇಖ ಹಾಗೂ ಕೆ ಎಸ್ ಎಸ್ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀಮತಿ ಸುಮಿತ್ರ ಉಪಸ್ಥಿತರಿದ್ದರು. ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಹಾಗೂ ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಶೀಲತಾ ಕಮಿಲಾ ಸ್ವಾಗತಿಸಿ, ನಿಶ್ಚಿತ ವಂದಿಸಿದರು.

. . . . . . . . .

ಸಾಂಸ್ಕೃತಿಕ ಸ್ಪರ್ಧೆಯಾದ ವೈಯಕ್ತಿಕ ನೃತ್ಯ ಹಾಗೂ ವೈಯಕ್ತಿಕ ಹಾಡು ಸ್ಪರ್ಧೆಗೆ ಸುಳ್ಯ ಕಡಬ ವಲಯದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ನಂತರ ಸಮಾರೋಪ ಸಮಾರಂಭ ನಡೆಯಿತು.

. . . . . . .

ಕೆಎಸ್ಎಸ್ ಕಾಲೇಜಿನ ನಿಕಟಪೂರ್ವ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಆರತಿ ಕೆ ಉಪಸ್ಥಿತರಿದ್ದರು. ಈ ಸ್ಪರ್ಧೆಗೆ ತೀರ್ಪುಗಾರರಾಗಿ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರುಣ ಮತ್ತು ಸುಬ್ರಹ್ಮಣ್ಯ ಗುತ್ತಿಗಾರು ಘಟಕದ ನೃತ್ಯ ನಿರ್ದೇಶಕರು ಕು. ಪ್ರಣಮ್ಯ ಸಹಕರಿಸಿದರು.

ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ದ್ವಿತೀಯ ಸ್ಥಾನವನ್ನು ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ ಪಡೆದುಕೊಂಡಿತು. ವೈಯಕ್ತಿಕ ಹಾಡಿನಲ್ಲಿ ಪ್ರಥಮ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು, ದ್ವಿತೀಯ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪಡೆದುಕೊಂಡಿತು. ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು. ಕೆಎಸ್ಎಸ್ ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಸುಮಿತ್ರ ಸ್ವಾಗತಿಸಿ, ಸಾಕ್ಷಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading