ಸುಳ್ಯದಲ್ಲಿ ಸ್ವದೇಶಿ ಆಹಾರ ಮೇಳ ಉದ್ಘಾಟನೆ | ಸ್ವದೇಶಿ ಆಹಾರ ಪದ್ಧತಿ ನಮ್ಮ ಪರಂಪರೆಯ ಸೊಗಡನ್ನು ಉಳಿಸುತ್ತದೆ; ನ. ಸೀತಾರಾಮ

ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ವಿವಿಧ ಸಂಸ್ಕೃತಿಗಳ ಪ್ರಭಾವದಿಂದ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳು ಮರೆಯಾಗುತ್ತಿವೆ. ನಮ್ಮ ಪರಂಪರೆಯ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸ್ವದೇಶಿ ಆಹಾರ ಮೇಳಗಳು ಅಗತ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನ. ಸೀತಾರಾಮ ಹೇಳಿದರು.

. . . . . . . . .

ಅ. 2ರಂದು ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸ್ವದೇಶಿ ಆಹಾರ ಮೇಳ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಹೊರ ದೇಶದ ವಿವಿಧ ವಿಧಾನಗಳು ಹಾಗೂ ಆಹಾರ ಶೈಲಿಗಳು ನಮ್ಮ ಬದುಕಿನಲ್ಲಿ ಪ್ರವೇಶಿಸಿವೆ. ಇದರಿಂದ ನಮ್ಮ ಸ್ವದೇಶಿ ಆಹಾರ ಪದ್ಧತಿ ಹಾಗೂ ಪರಂಪರೆಯ ಸೊಗಡು ಕಳೆದುಹೋಗದಂತೆ ಜಾಗೃತಿ ಮೂಡಿಸುತ್ತದೆ ಎಂದರು.

. . . . . . .

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ನಾವು ಸೇವಿಸುವ ಆಹಾರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸ್ವದೇಶಿ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು ಅಗತ್ಯ. ಅ. 2, 3 ಮತ್ತು 4ರಂದು ನಡೆಯುವ ಈ ಮೇಳದ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಸುಬೋಧ್ ಶೆಟ್ಟಿ ಮೇನಾಲ, ನ. ಪಂ. ಮಾಜಿ ಸದಸ್ಯೆ ಶಿಲ್ಪಾ ಸುದೇವ, ನ. ಪಂ. ಮಾಜಿ ಅಧ್ಯಕ್ಷ ವಿನಯ್ ಕಂದಡ್ಕ, ಬುದ್ಧ ನಾಯ್ಕ, ತಾ. ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಶಶಿಕಲಾ ನೀರಬಿದಿರೆ, ಸುನಿಲ್ ಕೇರ್ಪಳ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಪೂರ್ಣೇಶ್ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading