ಸುಬ್ರಹ್ಮಣ್ಯ : ಕೃಷಿಕರಿಗೆ ಸಾವಯವ ಗೊಬ್ಬರಗಳ ಲೋಕಾರ್ಪಣೆ

ಸುಬ್ರಹ್ಮಣ್ಯ ಅಕ್ಟೋಬರ್ 2: ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಈ ದಿನ ಗಾಂಧಿ ಜಯಂತಿಯ ಶುಭದಿನದಂದು ರಾಜ್ಯದ್ಯಂತ ಆಸಕ್ತ ಕೃಷಿಕರಿಗೆ ನೀಡುವ ಸಾವಯವ ಗೊಬ್ಬರಗಳ ಲೋಕಾರ್ಪಣ ಕಾರ್ಯಕ್ರಮ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕಾರ್ಪೊರೇಟಿವ್ ಸೊಸೈಟಿ ಲಿಮಿಟೆಡ್ ನ ನಿರ್ದೇಶಕ ಜಯಪ್ರಕಾಶ್ ಕೂಜುಗೋಡು ಮಾತನಾಡುತ್ತ “ಇಂದು ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ ,ಓಡಾಡುವ ಮಣ್ಣು, ಎಲ್ಲವೂ ವಿಷಪೂರಿತವಾಗಿದೆ. ಈ ನಿಟ್ಟಿನಲ್ಲಿ ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸಿದಾಗ ನಮ್ಮ ಕಣ್ಣಿಗೆ ಕಾಣದ ಕೋಟ್ಯಾಂತರ ಜೀವಿಗಳು ಅಭಿವೃದ್ಧಿ ಹೊಂದಿ ಉಸಿರಾಟಕ್ಕೂ ಆರೋಗ್ಯಕರವಾದ ವಾತಾವರಣವನ್ನು ಉಂಟುಮಾಡುತ್ತವೆ. ಆದ್ದರಿಂದ ಎಲ್ಲಾ ಕೃಷಿಕರು ಸಾವಯವ ಗೊಬ್ಬರವನ್ನ ತಮ್ಮ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಬೇಕೆಂದು” ಅವರು ಕರೆಕೊಟ್ಟರು. ಈ ಸಂದರ್ಭದಲ್ಲಿ ಪ್ರಮುಖರಾದ ಅಶೋಕ್ ಕುಮಾರ್ ಮೂಲೆಮಜಲು, ಅತ್ಯುತ್ತ ಗೌಡ, ಸಾವಯವ ಕೃಷಿಕರಾದ ರಾಧಾಕೃಷ್ಣ ಭಟ್, ವಾಸುದೇವ ಬೈಪಾಡಿತಾಯ, ಯಶವಂತ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading