“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಸೆ.21)ದಿಂದ ಶನಿವಾರ(ಸೆ.26)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ ; ಅಡಿಕೆಯ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಸ್ಥಿರತೆ..! – ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಏರಿಕೆ..! ; ಕಾಳುಮೆಣಸು ಧಾರಣೆಯಲ್ಲಿ ಇಳಿಕೆ – ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳಲ್ಲಿ ಸಂಪೂರ್ಣ ಸ್ಥಿರತೆ..!

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಆಯಾ ದಿನಗಳ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್‌ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಸೆಪ್ಟೆಂಬರ್ 21 ಸೋಮವಾರದಿಂದ ಸೆಪ್ಟೆಂಬರ್ 26 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದಿರುವ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

1) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ : ಅಡಿಕೆಯ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಸ್ಥಿರತೆ..!
ಈ ವಾರದ “ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ”ಯಲ್ಲಿ ಸಂಪೂರ್ಣ ಸ್ಥಿರತೆಯ ವಾತಾವರಣ ಕಂಡುಬಂದಿದ್ದು, ಅಡಿಕೆಯ ಮುಖ್ಯ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್ ಹಾಗೂ ಉಪ ಉತ್ಪನ್ನಗಳಾದ ಫಟೋರಾ, ಉಳ್ಳಿ ಮತ್ತು ಕರಿಗೋಟು ಧಾರಣೆಗಳು ಸೋಮವಾರದ ದರವನ್ನೇ ಶನಿವಾರವೂ ಕೂಡ ಸ್ಥಿರವಾಗಿ ಕಾಯ್ದುಕೊಂಡಿವೆ.
* ಹೊಸ ಅಡಿಕೆ – ಸೋಮವಾರದಂದು ಕನಿಷ್ಠ ₹395 ರಿಂದ ಗರಿಷ್ಠ ₹475 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಏರಿಳಿತಗಳಿಲ್ಲದೇ ಅದೇ ಬೆಲೆಯಲ್ಲಿ ಮುಂದುವರಿದಿದೆ.
* ಹಳೆ ಅಡಿಕೆ ಹಾಗೂ ಡಬಲ್ ಚೋಲ್ – ಸೋಮವಾರದಂದು ಕನಿಷ್ಠ ₹390 ರಿಂದ ಗರಿಷ್ಠ ₹550 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಗಳಿಲ್ಲದೇ ಸ್ಥಿರವಾಗಿ ಮುಂದುವರಿದಿದೆ.
* ಫಟೋರಾ – ಸೋಮವಾರದಂದು ಕನಿಷ್ಠ ₹310 ರಿಂದ ಗರಿಷ್ಠ ₹360 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಏರಿಳಿತಗಳಿಲ್ಲದೇ ಸ್ಥಿರತೆಯನ್ನು ಕಾಯ್ದುಕೊಂಡಿದೆ.
* ಉಳ್ಳಿ – ಸೋಮವಾರದಂದು ಕನಿಷ್ಠ ₹220 ರಿಂದ ಗರಿಷ್ಠ ₹245 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಬದಲಾವಣೆಗಳಿಲ್ಲದೇ ಸ್ಥಿರವಾಗಿ ಮುಂದುವರಿದಿದೆ.
* ಕರಿಗೋಟು – ಸೋಮವಾರದಂದು ಕನಿಷ್ಠ ₹220 ರಿಂದ ಗರಿಷ್ಠ ₹245 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಏರಿಳಿತಗಳಿಲ್ಲದೇ ಸ್ಥಿರತೆಯನ್ನು ಕಾಯ್ದುಕೊಂಡಿದೆ.

2) ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆ : ಕಾಳುಮೆಣಸು ಧಾರಣೆಯಲ್ಲಿ ಇಳಿಕೆ ; ಕೊಬ್ಬರಿ ಹಾಗೂ ಕೊಕ್ಕೋ ದರಗಳಲ್ಲಿ ಸಂಪೂರ್ಣ ಸ್ಥಿರತೆ..!
ಈ ವಾರದ “ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆ”ಯಲ್ಲಿ ಇತರೆ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು ಧಾರಣೆಯಲ್ಲಿ ಕನಿಷ್ಠ ಹಾಗೂ ಗರಿಷ್ಠ ಎರಡೂ ವಿಭಾಗಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ವಾರಪೂರ್ತಿ ಸಂಪೂರ್ಣ ಸ್ಥಿರತೆ ಕಂಡುಬಂದಿದೆ.
* ಕಾಳುಮೆಣಸು – ಸೋಮವಾರದಂದು ಕನಿಷ್ಠ ₹590 ರಿಂದ ಗರಿಷ್ಠ ₹685 ಇದ್ದ ಬೆಲೆ ಶನಿವಾರದಂದು ಕನಿಷ್ಠ ಹಾಗೂ ಗರಿಷ್ಠ ಎರಡೂ ಕಡೆಗಳಲ್ಲೂ ತಲಾ ₹5 ಕುಸಿತಗೊಂಡು ಕನಿಷ್ಠ ₹585 ರಿಂದ ಗರಿಷ್ಠ ₹680 ಕ್ಕೆ ತಲುಪಿದೆ.
* ಕೊಬ್ಬರಿ – ಸೋಮವಾರದಂದು ಕನಿಷ್ಠ ₹135 ರಿಂದ ಗರಿಷ್ಠ ₹165 ಇದ್ದ ಬೆಲೆ ಶನಿವಾರದಂದು ಕೂಡ ಯಾವುದೇ ಏರಿಳಿತಗಳಿಲ್ಲದೇ ಸ್ಥಿರವಾಗಿ ಮುಂದುವರಿದಿದೆ.
* ಕೊಕ್ಕೋ(ಹಸಿ/ಒಣ) – ಸೋಮವಾರದಿಂದ ಶನಿವಾರದವರೆಗೆ ಯಾವುದೇ ಏರಿಳಿತಗಳಿಲ್ಲದೇ ಹಸಿ ಕೊಕ್ಕೋ ಕನಿಷ್ಠ ₹70 ರಿಂದ ಗರಿಷ್ಠ ₹100 ಹಾಗೂ ಒಣ ಕೊಕ್ಕೋ ಕನಿಷ್ಠ ₹320 ರಿಂದ ಗರಿಷ್ಠ ₹350 ರಲ್ಲೇ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿವೆ.

3) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆ : ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಏರಿಕೆ..!
ಈ ವಾರದ “ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆ”ಯಲ್ಲಿ ರಬ್ಬರ್ ನ ವಿವಿಧ ವಿಭಾಗಗಳಾದ ಗ್ರೇಡ್, ಲಾಟ್ ಹಾಗೂ ಸ್ಕ್ರ್ಯಾಪ್ ನ ಎರಡೂ ವಿಭಾಗಗಳಲ್ಲೂ ತಲಾ ₹4 ರಂತೆ ಏರಿಕೆ ಕಂಡುಬಂದಿದೆ.
* ಗ್ರೇಡ್ ರಬ್ಬರ್ – ಸೋಮವಾರದಂದು ₹270 ಇದ್ದ ಬೆಲೆ ಶನಿವಾರದಂದು ₹274 ಕ್ಕೆ ಏರಿಕೆ ಕಂಡಿದೆ.
* ಲಾಟ್ ರಬ್ಬರ್ – ಸೋಮವಾರದಂದು ₹255 ಇದ್ದ ಬೆಲೆ ಶನಿವಾರದಂದು ₹259 ಕ್ಕೆ ಏರಿಕೆಯಾಗಿದೆ.
* ಸ್ಕ್ರ್ಯಾಪ್ ಪ್ರಥಮ ದರ್ಜೆ – ಸೋಮವಾರದಂದು ₹170 ಇದ್ದ ಬೆಲೆ ಶನಿವಾರದಂದು ₹174 ಕ್ಕೆ ಏರಿಕೆ ಕಂಡಿದೆ.
* ಸ್ಕ್ರ್ಯಾಪ್ ದ್ವಿತೀಯ ದರ್ಜೆ – ಸೋಮವಾರದಂದು ₹160 ಇದ್ದ ಬೆಲೆ ಶನಿವಾರದಂದು ₹164 ಕ್ಕೆ ಏರಿಕೆಯಾಗಿದೆ.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಈ ವಾರದ(ಸೆಪ್ಟೆಂಬರ್ 21 ಸೋಮವಾರದಿಂದ ಸೆಪ್ಟೆಂಬರ್ 26 ಶನಿವಾರದವರೆಗಿನ) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತಿದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣ-ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಆವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ಆದ್ದರಿಂದ ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading