ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜ್ಞಾನ ದೀಪೋತ್ಸವ–2026 ಸಂಭ್ರಮ ; ಗೂಡು ದೀಪ ಸ್ಪರ್ಧೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕುಕ್ಕೆ ಸುಬ್ರಹ್ಮಣ್ಯ, ನ.11 : ಶ್ರೀ ಜ್ಞಾನ ದೀಪ ವಿದ್ಯಾರ್ಥಿ ಸೇವಾ ಟ್ರಸ್ಟ್ (ರಿ.), SSLC-2005 ಬ್ಯಾಚ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಯೋಜಿಸಲಾದ ಜ್ಞಾನ ದೀಪೋತ್ಸವ–2026 ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

. . . . . . . . .

ಟ್ರಸ್ಟ್ ವತಿಯಿಂದ ಪ್ರಥಮ ಬಾರಿಗೆ ಸಾರ್ವಜನಿಕ ಮಟ್ಟದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಗೂಡು ದೀಪ ಸ್ಪರ್ಧೆಯು ಪ್ರಮುಖ ಆಕರ್ಷಣೆಯಾಗಿತ್ತು. ಸಾಂಪ್ರದಾಯಿಕ ಕಲೆ, ಸೃಜನಶೀಲತೆ ಹಾಗೂ ಪರಿಸರ ಸ್ನೇಹಿ ಚಿಂತನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಸ್ಪರ್ಧೆಯಲ್ಲಿ ವಿವಿಧ ಆಕರ್ಷಕ ಗೂಡು ದೀಪಗಳು ಪ್ರದರ್ಶನಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.

. . . . . . .

ಗೂಡು ದೀಪ ಸ್ಪರ್ಧೆಯಲ್ಲಿ ಸಂಜನ್ ಕುಲ್ಕುಂದ ಅವರು ಪ್ರಥಮ ಬಹುಮಾನ, ಸುದೀಶ್ ಕುಲ್ಕುಂದ ಅವರು ದ್ವಿತೀಯ ಬಹುಮಾನ ಹಾಗೂ ಪ್ರತೀಕ್ ಜಿ.ಎನ್. ಅವರು ತೃತೀಯ ಬಹುಮಾನ ಪಡೆದುಕೊಂಡರು. ಪೂರ್ವಿ ಪೂಜನ್ ಅವರು ಜನಮೆಚ್ಚಿದ ಗೂಡು ದೀಪ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ವಿಜೇತರನ್ನು ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.

ಸ್ಪರ್ಧೆಯ ತೀರ್ಪುಗಾರರಾಗಿ ದಿನೇಶ್ ಕುಂದರ್, ಚಿತ್ರಕಲಾ ಅಧ್ಯಾಪಕರು, ಗೋಪಾಲಕೃಷ್ಣ ಪ್ರೌಢಶಾಲೆ, ಬಿಳಿನೆಲೆ ಹಾಗೂ ಶ್ರೀ ಯಶೋಧಾ ಕೃಷ್ಣ, ಅಲಂಕಾರಿಕ ಕಲಾವಿದರು ಕಾರ್ಯನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಕುಮಾರಿ ಗೌರಿತಾ ಅವರು ಬರೆದಿರುವ “ಪುಟ್ಟ ಕಥಾ ಪ್ರಪಂಚ” ಎಂಬ ಮಕ್ಕಳ ಕಥಾ ಪುಸ್ತಕದ ಬಿಡುಗಡೆ ಕಾರ್ಯಕ್ರಮವೂ ನಡೆಯಿತು. SSPU ಕಾಲೇಜಿನ ಪ್ರೌಢಶಾಲಾ ವಿಭಾಗದ ನಿವೃತ್ತ ಮುಖ್ಯ ಶಿಕ್ಷಕರಾದ ಯಶವಂತ ರೈ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಿದರು. ಮಕ್ಕಳ ಸಾಹಿತ್ಯಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮವು ಜ್ಞಾನ ದೀಪೋತ್ಸವದ ಮತ್ತೊಂದು ವಿಶೇಷ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದ ಅತಿಥಿಗಳಾಗಿ ಭುವನೇಶ್ ಕುಲ್ಕುಂದ, ವನ್ಯಜೀವಿ ಸಂರಕ್ಷಕರು ಹಾಗೂ ಕೃಷ್ಣ ಭಟ್, ಗಣಿತ ಅಧ್ಯಾಪಕರು, SSPU ಕಾಲೇಜಿನ ಪ್ರೌಢಶಾಲಾ ವಿಭಾಗ ಇವರು ಉಪಸ್ಥಿತರಿದ್ದರು. ಟ್ರಸ್ಟ್‌ನ ಸದಸ್ಯರಾದ ಪ್ರತೀಕ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವೀಣಾಶ್ರೀ ಅವರು ನೆರವೇರಿಸಿದರು.

ಕಾರ್ಯಕ್ರಮದ ಅಂಗವಾಗಿ ಅಕ್ಷರ ಗಾನಸುಧೆ ಹಾಗೂ ದುರ್ಗಾಂಬಾ ಮೆಲೋಡೀಸ್ ತಂಡದ ಸದಸ್ಯರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು. ಸಂಗೀತಮಯ ಮನರಂಜನಾ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿ ಜ್ಞಾನ ದೀಪೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಶ್ರೀ ಜ್ಞಾನ ದೀಪ ವಿದ್ಯಾರ್ಥಿ ಸೇವಾ ಟ್ರಸ್ಟ್ (ರಿ.) ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ಹೊಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading