ದ್ವಾದಶ ರಾಶಿಗಳ ದಿನ ಭವಿಷ್ಯ = ದಿನಾಂಕ : 25-09-2026 ; ವಾರ : ಶುಕ್ರವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷ ರಾಶಿ🐏* 📃,ತಾಯಿಯ ಸಹಾಯದಿಂದ ಆರ್ಥಿಕ ಲಾಭ ದೊರೆಯಲಿದೆ. ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ಗೊಂದಲಮಯ ಪರಿಸ್ಥಿತಿ ಇರುತ್ತದೆ ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ,ಗಮನಿಸಿ:-ವೃತ್ತಿಪರ ವ್ಯವಹಾರಗಳು ಬಹಳ ನಿಧಾನವಾಗಿ ಸಾಗುತ್ತವೆ,ಪರಿಹಾರ:-ಕುಲದೇವರ ಪ್ರಾರ್ಥನೆ ಮಾಡಿ,

. . . . . . .

*02,🐂ವೃಷಭ ರಾಶಿ🐂*📃,ಮನಸ್ಸು ಪ್ರಸನ್ನವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರಿಂದ ನಿಮಗೆ ಬೆಂಬಲ ಸಿಗುತ್ತದೆ. ಆದಾಯ ಹೆಚ್ಚಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಶ್ರಮಕ್ಕೆ ತಕ್ಕಫಲ ದೊರೆಯುತ್ತದೆ. ಆರ್ಥಿಕಪರಿಸ್ಥಿತಿ ಆಶಾದಾಯಕವಾಗಿರುತ್ತದೆ, ಗಮನಿಸಿ:-ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ,ಪರಿಹಾರ:-ಮಾತೇ ಮಹಾಲಕ್ಷ್ಮಿಯನ್ನು ಪೂಜಿಸಿ,

*03,👥ಮಿಥುನರಾಶಿ👥*📃,ವ್ಯವಹಾರದಲ್ಲಿ ಹೆಚ್ಚಳ ಕಂಡುಬರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗುತ್ತವೆ. ಬಾಲ್ಯದ ಗೆಳೆಯರೊಂದಿಗೆ ಸಣ್ಣಪುಟ್ಟ ವಿವಾದಗಳು ಇರುತ್ತವೆ. ಕೈಗೆತ್ತಿಕೊಂಡ ಕೆಲಸ ನಿಧಾನವಾಗುತ್ತದೆ,ಗಮನಿಸಿ:-ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ,ಪರಿಹಾರ:-ನಿಮ್ಮ ಗ್ರಾಮ ದೇವತೆಯನ್ನು ಪೂಜಿಸಿ,

*04,🦀ಕಟಕ ರಾಶಿ🦀*📃,ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ತಾಳ್ಮೆಯಿಂದಿರಿ. ದೀರ್ಘಾವಧಿ ಸಾಲದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಹಠಾತ್ ಯಶಸ್ವಿಯಾಗುತ್ತೀರಿ,ಗಮನಿಸಿ:-ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ,ಪರಿಹಾರ:-ದುರ್ಗಾ ಕವಚವನ್ನು ಪಠಿಸಿ,

*05,🦁ಸಿಂಹ ರಾಶಿ🦁*📃,ಆದಾಯ ಹೆಚ್ಚಾಗಲಿದೆ. ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಆದರೆ, ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗಬಹುದು. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ,ಗಮನಿಸಿ:-ದೂರ ಪ್ರಯಾಣವನ್ನು, ಮುಂದೂಡುವುದು ಉತ್ತಮ,ಪರಿಹಾರ:-ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ,

*06,👩‍🦳ಕನ್ಯಾ ರಾಶಿ👩‍🦳*📃,ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ಸಿಗುತ್ತದೆ. ಹಣ ಖರ್ಚಿನ ಮೇಲೆ ನಿಗಾ ಇರಿಸಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿಸಾಧಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ದೀರ್ಘಕಾಲದ ವಿವಾದಗಳು ಬಗೆಹರಿಯುತ್ತವೆ,ಗಮನಿಸಿ:-ವೃತ್ತಿಪರ ವ್ಯವಹಾರಗಳು ಸ್ವಲ್ಪ ಲಾಭದಾಯಕವಾಗಿರುತ್ತವೆ,ಪರಿಹಾರ:-ಮನೆದೇವರ ಪ್ರಾರ್ಥನೆ ಮಾಡಿ,

*07,⚖️ತುಲಾ ರಾಶಿ⚖️*📃,ಆರೋಗ್ಯದ ಬಗ್ಗೆ ಗಮನ ಕೊಡಿ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆ ಇರಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನಿರುದ್ಯೋಗಿಗಳಿಗೆ ಬಹುನಿರೀಕ್ಷಿತ, ಅವಕಾಶಗಳು ಸಿಗುತ್ತವೆ. ಸ್ಥಿರಾಸ್ತಿ ಮಾರಾಟದಲ್ಲಿ ಹೊಸ ಲಾಭ ಸಿಗುತ್ತದೆ,ಗಮನಿಸಿ:-ಕೈಗೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ,ಪರಿಹಾರ:-ಸೂರ್ಯದೇವನ ಪ್ರಾರ್ಥನೆ ಮಾಡಿ,

*08,🦂ವೃಶ್ಚಿಕ ರಾಶಿ🦂*📃,ನಿಮ್ಮ ಮನಸ್ಸು ಹಣಕಾಸಿನ ವಿಷಯಗಳ ಬಗ್ಗೆ ಚಿಂತಿತವಾಗಿರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೈಗೆತ್ತಿಕೊಂಡ ಕೆಲಸಗಳು ಹೆಚ್ಚಿನ ಪ್ರಯತ್ನದಿಂದ ಪೂರ್ಣಗೊಳ್ಳುವುದಿಲ್ಲ. ಸಂಬಂಧಿಕರೊಂದಿಗೆ ವಿವಾದಗಳಿರುತ್ತವೆ,ಗಮನಿಸಿ:-ವ್ಯರ್ಥ ಖರ್ಚುಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು,ಪರಿಹಾರ:-ಈ ದಿನ ಸಂಜೆ ತಪ್ಪದೇ ನವಗ್ರಹಗಳಿಗೆ ಪ್ರದಕ್ಷಣೆ ಹಾಕಿ,

*09,🏹ಧನಸ್ಸುರಾಶಿ🏹*📃,ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಆತ್ಮೀಯರೊಂದಿಗೆ ಕೆಲವು ವ್ಯವಹಾರಗಳಲ್ಲಿ ವಿವಾದಗಳಿರುತ್ತವೆ. ಹಣಕಾಸಿನ ಏರಿಳಿತಗಳು ಹೆಚ್ಚಾಗುತ್ತವೆ,ಗಮನಿಸಿ:-ಸಹೋದರರೊಂದಿಗೆಸ್ಥಿರಾಸ್ತಿವಿವಾದವಿರುತ್ತದೆ,ಪರಿಹಾರ:-ಬ್ರಾಹ್ಮಣರಿಗೆ ಅರಿಶಿನ ವಸ್ತ್ರವನ್ನು ದಕ್ಷಿಣೆ ಸಮೇತ ದಾನ ಮಾಡಿ,

*10,🐊ಮಕರ ರಾಶಿ🐊*📃,ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುವುದರಿಂದ ಮನಸ್ಸು ಸಂತೋಷವಾಗಿರುತ್ತದೆ. ಮಿತ್ರರಿಂದ ಅಪರೂಪದ ಆಮಂತ್ರಣಗಳು ಸಿಗುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ,ಗಮನಿಸಿ:-ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ,ಪರಿಹಾರ:-ಮೂಕ ಪ್ರಾಣಿಗಳಿಗೆ ಆಹಾರ ನೀಡಿ,

*11,⚱️ಕುಂಭ ರಾಶಿ⚱️*📃,ಇಂದು ನೀವು ನಿಮ್ಮ ಸಹೋದರ ಸಹೋದರಿಯರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ದೀರ್ಘಕಾಲದ ಅನಾರೋಗ್ಯದಿಂದ ನಿಮಗೆ ಪರಿಹಾರ ಸಿಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ,ಗಮನಿಸಿ:-ನಿರುದ್ಯೋಗಿಗಳಿಗೆಶುಭ ಸುದ್ದಿದೊರೆಯುತ್ತದೆ,ಪರಿಹಾರ:-ಓಂ ನಮಃ ಶಿವಾಯ ಎಂದು ಪಠಣೆ ಮಾಡಿ,

*12,🐋ಮೀನ ರಾಶಿ🐋*📃,ಅನಗತ್ಯ ಕೋಪವನ್ನು ತಪ್ಪಿಸಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಒಂದು ಕೆಲಸವನ್ನು ಪೂರ್ಣಗೊಳಿಸಲು ನೀವು ಹೆಚ್ಚು ಶ್ರಮಿಸಬೇಕಾಗಬಹುದು. ಕೈಗೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ, ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ,ಗಮನಿಸಿ:- ಉದ್ಯೋಗಿಗಳು ಅಧಿಕಾರಿಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ, ಪರಿಹಾರ:-ಅಂಗವಿಕಲರಿಗೆಅನ್ನದಾನ ಮಾಡಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading