ಕಸ್ತೂರಿ ರಂಗನ್ ವರದಿಯ ವಿರುದ್ಧ ಕರ್ನಾಟಕ ಸರಕಾರದ ಐತಿಹಾಸಿಕ ತೀರ್ಮಾನ.- ಎಂ. ವೆಂಕಪ್ಪ ಗೌಡ

ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಆಗಿರುವ ಅನಾನುಕೂಲವನ್ನು ಸರಿಪಡಿಸುವ ಸಂಪೂರ್ಣ ಪ್ರಯತ್ನವನ್ನು ಈ ತನಕದ ಯಾವ ಮುಖ್ಯಮಂತ್ರಿಗಳಿಂದಲೂ ಮಾಡಲಾಗದ ಸಮಸ್ಯೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಸರ್ವ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಸ್ತೂರಿ ರಂಗನ್ ವರದಿಯಿಂದ ಭಾದಿತ ರೈತಾಪಿ ವರ್ಗದ ಹಿತ ರಕ್ಷಣೆಗೆ ಮುಂದಾಗಿರುವುದು ಒಂದು ಐತಿಹಾಸಿಕವಾದ ತೀರ್ಮಾನವಾಗಿದೆ. ನಾನು ಕೂಡ ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆದಿರುವ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ, ಆದರೆ ಈ ತನಕ ಹೋರಾಟಕ್ಕೆ ಇಳಿದ ರೈತರಿಗೆ ಯಾವುದೇ ಖಚಿತವಾದ ತೀರ್ಮಾನ ಸಿಕ್ಕದೆ ರೈತಾಪಿ ವರ್ಗವು ಆತಂಕದ ದಿನಗಳಲ್ಲಿ ಜೀವನ ಮಾಡಿಕೊಂಡು ಬಂದಿದ್ದರು. ಆದರೆ ವಿಧಾನ ಮಂಡಲ ಮತ್ತು ವಿಧಾನ ಪರಿಷತ್ ಗಳಲ್ಲಿ ಕೈಗೊಂಡಿರುವ ತೀರ್ಮಾನಗಳು ಕಸ್ತೂರಿ ರಂಗನ್ ವರದಿ ಭಾದಿತ ರೈತರು ನೆಮ್ಮದಿಯ ನಿಟ್ಟಿಸಿರು ಬಿಡುವ ಐತಿಹಾಸಿಕವಾದ ತೀರ್ಮಾನ ಆಗಿದೆ ಎಂಬುದಾಗಿ ಪ್ರತಿಯೊಬ್ಬ ರೈತನು ಬಣ್ಣಿಸಬೇಕಾಗುತ್ತದೆ. ಅದೇ ಪ್ರಕಾರ ಈ ತೀರ್ಮಾನವನ್ನು ಕೇಂದ್ರ ಸರ್ಕಾರ ಒಪ್ಪಿ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಲ್ಲಿ ಅದು ರೈತರ ಪಾಲಿಗೆ ಮರೆಯಲಾಗದ ಕ್ಷಣಗಳಾಗಬಹುದು, ಒಂದು ವೇಳೆ ಮತ್ತೆ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಯಥಾವತ್ತಾಗಿ ಜಾರಿಗೊಳಿಸುವಂತೆ ತೀರ್ಮಾನವನ್ನು ತೆಗೆದುಕೊಂಡರೆ, ಅದು ಕಸ್ತೂರಿರಂಗನ್ ವರದಿ ಭಾದಿತ ರೈತಾಪಿ ವರ್ಗಕ್ಕೆ ಮರಣ ಶಾಸನವಾಗಬಹುದು ಎಂಬುದಾಗಿ ಕೆ.ಪಿ.ಸಿ.ಸಿ ಯ ಕೋ ಆರ್ಡಿನೇಟರ್ ಹಾಗೂ ಸುಳ್ಯ ನಗರ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಯಂ. ವೆಂಕಪ್ಪ ಗೌಡ ರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading