ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ 11ನೇ ಆಯುರ್ವೇದ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಸೆಪ್ಟೆಂಬರ್ 23 ರಂದು 11ನೇ ಆಯುರ್ವೇದ ದಿನಾಚರಣೆಯ ಅಂಗವಾಗಿ ಆಯುರ್ವೇದದ ಮಹತ್ವದ ಅರಿವು ಮೂಡಿಸುವ ಸಲುವಾಗಿ ಆಯುರ್ವೇದದ ಕಡೆ ನಮ್ಮ ನಡೆ ಎಂಬ ಧ್ಯೇಯದೊಂದಿಗೆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ ಹಾಗೂ ಸಾರ್ವಜನಿಕ ಜಾಥಾವನ್ನು ಆಯೋಜಿಸಲಾಯಿತು.

. . . . . . . . .

ಆಯುರ್ವೇದ ದಿನಾಚರಣೆಯ ಸಲುವಾಗಿ ಕಳೆದ ಒಂದು ವಾರದಿಂದ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ವಿಧ್ಯಾರ್ಥಿಗಳಿಗೆ ಸೆಪ್ಟೆಂಬರ್ 11 ರಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಸಪ್ತಾಹದ ಅಂಗವಾಗಿ – ಕಾಲೇಜಿನ ಪಂಚಕರ್ಮ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ತಂಬನ್ ಅವರು ಮಹಿಳಾ ಆರೋಗ್ಯ ಕುರಿತು ಜಾಗೃತಿ ಕಾರ್ಯಗಾರವನ್ನು ಸೆಪ್ಟೆಂಬರ್ 17 ರಂದು ಇನ್ನರ್ ವೀಲ್ ಕ್ಲಬ್ ಆಫ್ ಸುಳ್ಯದ ಸಹಯೋಗದೊಂದಿಗೆ ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನಡೆಸಿದರು

. . . . . . .

ಕೆ ವಿ ಜಿ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರ ಸೋಣಂಗೇರಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಸೆಪ್ಟೆಂಬರ್ 19 ರಂದು ಆಯೋಜಿಸಲಾಗಿತ್ತು.
ಮಡಿಕೇರಿಯ NIMA ಕೊಡಗು ಹಾಗೂ NIMA ಸುಳ್ಯದ ಸಹಕಾರದೊಂದಿಗೆ ಸೆಪ್ಟೆಂಬರ್ 20 ರಂದು ‘Ayurvedic approach to Parkinson’s disease’ ವಿಷಯದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣವನ್ನು ವೈದ್ಯರ್ ಆಯುರ್ವೇದ ಆಸ್ಪತ್ರೆ ಪುತ್ತೂರು ಇದರ ಡಾ. ಪ್ರಶಾಂತ್ ಜಾನ ಹಾಗೂ ಡಾ. ರಾಮಚಂದ್ರ ಕುಪ್ಪರಿ ಅವರು ನೀಡಿದರು.
ಈ ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 21 ರಂದು ಸುಳ್ಯದ ನಗರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸೆಪ್ಟೆಂಬರ್ 22 ರಂದು ಕೆ ವಿ ಜಿ ಆಯುರ್ವೇದದ ಔಷಧೀಯ ಉದ್ಯಾನವನದಲ್ಲಿ ವಿವಿಧ ಆಯುರ್ವೇದ ಔಷಧಿ ಸಸ್ಯಗಳನ್ನು ನೆಡಲಾಯಿತು.

ಇಂದಿನ ಕಾರ್ಯಕ್ರಮದಲ್ಲಿ ಸುಳ್ಯ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಶ್ರೀ ಶೀನಪ್ಪರವರು, AOLE(R.) ಇದರ ಕೌನ್ಸಿಲ್ ಮೆಂಬರ್ ಶ್ರೀ ಜಗದೀಶ್ ಆಡ್ತಲೆ, ಕಾಲೇಜಿನ ಪ್ರಾಂಶುಪಾಲರು ಡಾ. ಲೀಲಾಧರ್ ಡಿ ವಿ, ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲ್, ಕಾಲೇಜಿನ ಅಕಾಡೆಮಿ ಕೋ – ಆರ್ಡಿನೇಟರ್ ಡಾ. ಕವಿತಾ ಬಿ.ಎಂ., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರದ್ವಾಜ್ ಬಿ, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು ನೀಲಿಮಾ ಮತ್ತು ತಂಡದವರು ಪ್ರಾರ್ಥಿಸಿ, ಕು . ಮಾನ್ಯ ಅಂಬೇಕಲ್ಲು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading