ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ರೋಟರಿ ಕ್ಲಬ್ ವತಿಯಿಂದ ಕೊಡುಗೆಗಳ ಹಸ್ತಾಂತರ ಮತ್ತು ಒಝೋನ್ ದಿನಾಚರಣೆ

ಮಾಸ್ತಿಕಟ್ಟೆ ತಡಗಜೆ ಅಂಗನವಾಡಿ ಕೇಂದ್ರದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಲಿಕಾ ಮೇಜುಗಳ ಹಸ್ತಾಂತರ ಹಾಗೂ ಒಝೋನ್ ದಿನಾಚರಣೆ ನಡೆಯಿತು.

. . . . . . . . .

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಮಹಮ್ಮದ್ ಆರೀಫ್ ಕಲಿಕಾ ಮೇಜುಗಳನ್ನು ವಿತರಿಸಿ ಶುಭಹಾರೈಸಿದರು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶೈನಿ ಕಿರಣ್ ಅಧ್ಯಕ್ಷತೆ ವಹಿಸಿದ್ದರು ಶಿಶು ಅಭಿವೃದ್ಧಿ ಯೋಜನೆಯ ಬೆಳ್ಳಾರೆ ವಲಯದ ಮೇಲ್ವಿಚಾರಾಕಿ ಉಷಾ ಪ್ರಸಾದ್ ರೈ, ರೋಟರಿ ವಲಯ ಲೆಫ್ಟಿನೆಂಟ್ ಚಂದ್ರಶೇಖರ್ ರೈ, ಪೂರ್ವ ಸಹಾಯಕ ರಾಜ್ಯಪಾಲ ವಿನಯ್ ಕುಮಾರ್, ಅಂಗನವಾಡಿ ಸಹಾಯಕಿ ಗುಲಾಬಿ, ಪುಟಾಣಿ ಮಕ್ಕಳು ಹಾಗೂ ರೋಟರಿ ಕ್ಲಬ್ ಸದಸ್ಯರುಉಪಸ್ಥಿತರಿದ್ದರು.

. . . . . . .

ಕಲಿಕಾ ಮೇಜುಗಳನ್ನು ಕೊಡುಗೆಯಾಗಿ ನೀಡಿದ ಪೋಷಕರಾದ ರೋಹಿತಾಶ್ವ ರೈ ಉಮಿಕ್ಕಳ, ಸಾದಿಕ್ ಮಾಸ್ತಿಕಟ್ಟೆ,ಕೆ ಎಂ ಆಸೀಫ್, ಸಾದಿಕ್ ಕೊಳಂಬಳ, ಅಬ್ದುಲ್ ಅರಿಶ್ ಕೊಳಂಬಳ, ಮಹಮ್ಮದ್ ಮುಸ್ತಾಫಾ ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading