ದುಗ್ಗಲಡ್ಕ : ಅನೆ ಹಾವಳಿ – ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಸಭೆ

ಕಳೆದೆರಡು ವಾರಗಳಿಂದ ಕಂದಡ್ಕ, ನೀರಬಿದಿರೆ ಕೊಯಿಕುಳಿ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟು ನಿರಂತರ ಕೃಷಿ ಹಾನಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಆ.10 ರಂದು ಅರಣ್ಯಾಧಿಕಾರಿಗಳ ತುರ್ತು ಸಭೆ ನಡೆಸಿದರು. ಆನೆ ಹಾವಳಿ ವಿಸ್ತರಣೆ ಯಾಗುತ್ತಿರುವುದನ್ನು ತಡೆಯುವ ಕುರಿತು ಚರ್ಚಸಲಾಯಿತು. 6 ಆನೆಗಳಿದ್ದ ಹಿಂಡಿನಿಂದ ಮೂರು ಆನೆಗಳು ಕೊಯಿಕುಳಿ ಕಡೆಗೆ ಸಂಚರಿಸಿರುವುದರಿಂದ ಕೃಷಿ ಹಾನಿ...

ಕೊಲ್ಲಮೊಗ್ರು: ವಿದ್ಯಾರ್ಥಿಗಳ ಹಾಗೂ ಪೋಷಕರ ಸಮನ್ವಯ ಕಾರ್ಯಾಗಾರ “ಅನುಬಂಧ” ; “ಮಕ್ಕಳನ್ನು ಕೇವಲ ಪರೀಕ್ಷೆಗೆ ಸಿದ್ಧಪಡಿಸಬೇಡಿ, ಜೀವನಕ್ಕೆ ಸಿದ್ಧಪಡಿಸಿ” : ಲೋಕೇಶ್ ಪೀರನಮನೆ

“ಮಕ್ಕಳಿಗೆ ಅಂಕಗಳಿಗಿಂತ ಬದುಕುವ ವಿವೇಕ ಹಾಗೂ ಆತ್ಮವಿಶ್ವಾಸ ಮುಖ್ಯವಾಗಿದ್ದು, ಪೋಷಕರು ಮಕ್ಕಳನ್ನು ಕೇವಲ ಪರೀಕ್ಷೆಗೆ ಸಿದ್ಧಪಡಿಸದೆ ಜೀವನಕ್ಕೆ ಸಿದ್ಧಪಡಿಸಬೇಕು” ಎಂದು ತರಬೇತುದಾರ ಲೋಕೇಶ್ ಪೀರನಮನೆ ಹೇಳಿದರು. ಬಂಗ್ಲೆಗುಡ್ಡೆ ಸ.ಹಿ‌.ಪ್ರಾ ಶಾಲಾ ವಠಾರದಲ್ಲಿ ಆ.09ರಂದು ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲೆಯ 9ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಆಯೋಜಿಸಲಾಗಿದ್ದ “ಅನುಬಂಧ” ಎಂಬ ವಿಶೇಷ ಸಮನ್ವಯ...
Ad Widget

ಆಷಾಢದಲ್ಲಿ 48 ದಿನಗಳ ವಿಶೇಷ ಆರಾಧನೆ: ಪೆರುವಾಜೆ ಜಲದುರ್ಗಾ ಕ್ಷೇತ್ರದ ಅಪರೂಪದ ಸಂಪ್ರದಾಯ| ಉದ್ಭವ ಶ್ರೀ ಜಲದುರ್ಗಾದೇವಿ–ಉದ್ಭವ ಶ್ರೀ ಮಹಾಗಣಪತಿಗೆ ಪ್ರತಿದಿನ ವಿಶೇಷ ಪೂಜೆ ; ಮಾಗಣೆ ಸೇರಿದಂತೆ ಕ್ಷೇತ್ರದ ಭಕ್ತರಿಂದ ಸೇವೆ ಸಮರ್ಪಣೆ

ಪೆರುವಾಜೆ: ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕಿನ 21 ಗ್ರಾಮಗಳ ಮಾಗಣೆ ಕ್ಷೇತ್ರವಾಗಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನವು ಜಾತ್ರೆ ಹಾಗೂ ನವರಾತ್ರಿ ಆಚರಣೆಗಳ ಜೊತೆಗೆ ಆಷಾಢ ಮಾಸದಲ್ಲಿಯೂ ವಿಶಿಷ್ಟ ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ.ಪ್ರತಿವರ್ಷ ಆಷಾಢ ಮಾಸದಲ್ಲಿ 48 ದಿನಗಳ ಕಾಲ ನಿರಂತರವಾಗಿ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನೆರವೇರಿಸುವ ಸಂಪ್ರದಾಯ...

ಭಾರೀ ಮಳೆ ; ಕೈಕಂಬ-ಚೇರು ಬಳಿ ರಸ್ತೆಯ ಮೇಲೆ ನೀರು ; ಸಂಚಾರ ಅಸ್ತವ್ಯಸ್ತ

ಸುಬ್ರಹ್ಮಣ್ಯ ಆಗಸ್ಟ್ 10 : ಪಶ್ಚಿಮ ಘಟ್ಟದ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸಣ್ಣಪುಟ್ಟ ಹಳ್ಳಗಳು ಕೂಡ ತುಂಬಿ ಹರಿಯುತ್ತಿದೆ. ಬಿಳಿನೆಲೆ-ಕೈಕಂಬ ಬಳಿಯ ಚೇರು ಎಂಬಲ್ಲಿ ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಒಮ್ಮೆಗೆ ನೀರು ಅಧಿಕವಾಗಿ ಬಂದು ಸುಬ್ರಹ್ಮಣ್ಯ-ಗುಂಡ್ಯ-ಧರ್ಮಸ್ಥ ಹೆದ್ದಾರಿಯನ್ನೇ ಬ್ಲಾಕ್ ಮಾಡಿ ಸಂಚಾರ ಅಸ್ತವ್ಯಸ್ತಗೊಳಿಸಿದೆ. ಇದರಿಂದಾಗಿ ವಾಹನಗಳು...

ಕುಕ್ಕೆ ಸುಬ್ರಹ್ಮಣ್ಯ : ಬಸ್ ನಿಲ್ದಾಣದಲ್ಲಿ ಜಾರಿ ಬೀಳುತ್ತಿರುವ ಪ್ರಯಾಣಿಕರು – ಬಿದ್ದು ಕೈ-ಕಾಲು ಮುರಿದುಕೊಳ್ಳುವ ಮುನ್ನ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ..!

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಿನಂಪ್ರತಿ ಆಗಮಿಸುವ ಸಾವಿರಾರು ಭಕ್ತಾದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಥಳೀಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬಸ್ ನಿಲ್ದಾಣದ ಆವರಣದಲ್ಲಿ ಸಂಚರಿಸುವುದೇ ಸಾರ್ವಜನಿಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಸ್ ನಿಲ್ದಾಣದ ಇಕ್ಕೆಲಗಳಲ್ಲಿ, ಎದುರುಗಡೆಯ ಮಾರ್ಗದ ಬದಿಗಳಲ್ಲಿ...

ವಿದ್ಯಾಮಾತಾದಲ್ಲಿ ಅಗ್ನಿಪಥ್, PC ಹಾಗೂ ವಾಚರ್ ನೇಮಕಾತಿಗಳಿಗೆ ಉಚಿತ ಫಿಸಿಕಲ್ ಫಿಟ್ನೆಸ್ ತರಬೇತಿ ಪ್ರಾರಂಭ

ಪುತ್ತೂರು: ಸೇನಾ ನೇಮಕಾತಿಗಳು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ಅಗ್ನಿಪಥ್, ಪೊಲೀಸ್ ಕಾನ್ಸ್ಟೇಬಲ್ (PC) ಮತ್ತು ಅರಣ್ಯ ಇಲಾಖೆಯ ವಾಚರ್ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉಚಿತ ದೈಹಿಕ ಸಾಮರ್ಥ್ಯ/ಫಿಟ್ನೆಸ್ ತರಬೇತಿಯನ್ನು ಪ್ರಾರಂಭಿಸಿದೆ. ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಗೆ ಪೂರ್ವ ತಯಾರಿ ನಡೆಸುತ್ತಿರುವವರು ಹಾಗೂ ಭವಿಷ್ಯದ ಸಶಸ್ತ್ರ...

ಸೋರುತ್ತಿರುವ ಮೆಸ್ಕಾಂ ಕಛೇರಿ – ಗ್ರಾಹಕರು ಜಾರಿ ಬಿದ್ದು ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ

ಸುಳ್ಯ ಮೆಸ್ಕಾಂ ಉಪ ವಿಭಾಗ ಕಛೇರಿಯು ಸೋರುತ್ತಿದ್ದು ಗ್ರಾಹಕರು ಜಾರಿ ಬಿದ್ದು ತೊಂದರೆಯಾಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಬಿಲ್ ಪಾವತಿ ಹಾಗೂ ಮತ್ತಿತರ ಕೆಲಸಗಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿದೆ.

ಸುಳ್ಯ : ಕುಸಿದ ಮ್ಯಾನ್ ಹೋಲ್ – ತುರ್ತು ದುರಸ್ತಿಗೆ ಆಗ್ರಹ

ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರು, ಶ್ರೀ ದೇವಿ ಕಾಂಪ್ಲೆಕ್ಸ್ ಬಳಿ ಮ್ಯಾನ್ ಹೋಲ್ ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಅಪಾಯ ಆಹ್ವಾನಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಜಾಗ್ರತೆಯಿಂದ ಸಂಚರಿಸಬೇಕಿದೆ. ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಂಡು ಸಂಭಾವ್ಯ ಅಪಾಯ ತಪ್ಪಿಸಬೇಕಿದೆ.

ಹವಾಮಾನ ಆಧಾರಿತ ಬೆಳೆ ವಿಮಾ ಕಂತು ಪಾವತಿಗೆ ಇನ್ನೂ ಇದೆ ಅವಕಾಶ – ಅಂತಿಮ ದಿನಾಂಕ ವಿಸ್ತರಣೆ

“ತೋಟಗಾರಿಕಾ ಬೆಳೆಗಳನ್ನು ಬೆಳೆದ ರೈತರು ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2026-27ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ನೋಂದಣಿಯ ಅಂತಿಮ ದಿನಾಂಕವನ್ನು ಆ.17 ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ಜಿಲ್ಲಾ ತೋಟಗಾರಿಕಾ ಜಂಟಿ ನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹವಾಮಾನ ಆಧಾರಿತ ಬೆಳೆವಿಮೆ...

ಡಾ| ನಿಶ್ಚಿತಾ ಕಿಶೋರ್ ಅರಂಪಾಡಿ ಅವರಿಗೆ “ಡಾ| ಬಿ.ಸಿ ರಾಯ್ ವೈದ್ಯ ಸೇವಾ ಸ್ಮಾರಕ ಗೌರವ ಪ್ರಶಸ್ತಿ” ಪ್ರದಾನ

ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಬೆಂಗಳೂರು ಇದರ ಹಾಸನ ಜಿಲ್ಲಾ ಶಾಖೆಯ ವತಿಯಿಂದ ಡಾ| ನಿಶ್ಚಿತಾ ಕಿಶೋ‌ರ್ ಅವರಿಗೆ ಆ.08 ರಂದು “ಡಾ| ಬಿ.ಸಿ ರಾಯ್ ವೈದ್ಯ ಸೇವಾ ಸ್ಮಾರಕ ಗೌರವ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು. ಸಕಲೇಶಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ physician ಆಗಿರುವ ಇವರು ಕಳೆದ 18 ವರ್ಷದಿಂದ ಸರ್ಕಾರಿ ವೈದ್ಯರಾಗಿ...
Loading posts...

All posts loaded

No more posts

error: Content is protected !!