ಭಾರೀ ಮಳೆ ; ಕೈಕಂಬ-ಚೇರು ಬಳಿ ರಸ್ತೆಯ ಮೇಲೆ ನೀರು ; ಸಂಚಾರ ಅಸ್ತವ್ಯಸ್ತ

ಸುಬ್ರಹ್ಮಣ್ಯ ಆಗಸ್ಟ್ 10 : ಪಶ್ಚಿಮ ಘಟ್ಟದ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸಣ್ಣಪುಟ್ಟ ಹಳ್ಳಗಳು ಕೂಡ ತುಂಬಿ ಹರಿಯುತ್ತಿದೆ. ಬಿಳಿನೆಲೆ-ಕೈಕಂಬ ಬಳಿಯ ಚೇರು ಎಂಬಲ್ಲಿ ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಒಮ್ಮೆಗೆ ನೀರು ಅಧಿಕವಾಗಿ ಬಂದು ಸುಬ್ರಹ್ಮಣ್ಯ-ಗುಂಡ್ಯ-ಧರ್ಮಸ್ಥ ಹೆದ್ದಾರಿಯನ್ನೇ ಬ್ಲಾಕ್ ಮಾಡಿ ಸಂಚಾರ ಅಸ್ತವ್ಯಸ್ತಗೊಳಿಸಿದೆ. ಇದರಿಂದಾಗಿ ವಾಹನಗಳು ಎರಡು ಬದಿಗಳಲ್ಲಿ ಸಾಲುಗಟ್ಟಲೆ ನಿಂತು ಕಾಯಬೇಕಾಯಿತು. ಮಳೆ ನೀರು ಕಡಿಮೆಯಾದ ನಂತರ ರಸ್ತೆ ಸಂಚಾರ ಮುಕ್ತವಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading