ವಿದ್ಯಾಮಾತಾದಲ್ಲಿ ಅಗ್ನಿಪಥ್, PC ಹಾಗೂ ವಾಚರ್ ನೇಮಕಾತಿಗಳಿಗೆ ಉಚಿತ ಫಿಸಿಕಲ್ ಫಿಟ್ನೆಸ್ ತರಬೇತಿ ಪ್ರಾರಂಭ

ಪುತ್ತೂರು: ಸೇನಾ ನೇಮಕಾತಿಗಳು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ಅಗ್ನಿಪಥ್, ಪೊಲೀಸ್ ಕಾನ್ಸ್ಟೇಬಲ್ (PC) ಮತ್ತು ಅರಣ್ಯ ಇಲಾಖೆಯ ವಾಚರ್ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉಚಿತ ದೈಹಿಕ ಸಾಮರ್ಥ್ಯ/ಫಿಟ್ನೆಸ್ ತರಬೇತಿಯನ್ನು ಪ್ರಾರಂಭಿಸಿದೆ.

. . . . . . . . .

ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಗೆ ಪೂರ್ವ ತಯಾರಿ ನಡೆಸುತ್ತಿರುವವರು ಹಾಗೂ ಭವಿಷ್ಯದ ಸಶಸ್ತ್ರ ಪಡೆಗಳ ನೇಮಕಾತಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು.

. . . . . . .

ತರಬೇತಿಯ ಮುಖ್ಯಾಂಶಗಳು:
* ಉಚಿತ ವಸತಿ: ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
* ತರಬೇತಿ ಸಮಯ: ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳ ಅನುಕೂಲಕ್ಕಾಗಿ ಪ್ರತಿದಿನ ಬೆಳಿಗ್ಗೆ, ಸಾಯಂಕಾಲ ಅಥವಾ ಪ್ರತಿ ಭಾನುವಾರ ಬೆಳಿಗ್ಗೆ ನುರಿತ ತರಬೇತುದಾರರ ತಂಡದಿಂದ ವಿಶೇಷ ತರಬೇತಿ ನೀಡಲಾಗುತ್ತದೆ. ಬೆಳಿಗ್ಗೆ ತರಬೇತಿ ಮುಗಿಸಿಕೊಂಡು ಕಾಲೇಜಿಗೆ ಅಥವಾ ಉದ್ಯೋಗಕ್ಕೆ ತೆರಳಿ ಸಂಜೆ ಬಂದು ತರಬೇತಿಯಲ್ಲಿ ಪಾಲ್ಗೊಂಡು ವಸತಿ ವ್ಯವಸ್ಥೆಯನ್ನು ಉಪಯೋಗ ಮಾಡಿಕೊಳ್ಳಬಹುದು.
* ಸಂಸ್ಥೆಯ ಸಾಧನೆ: ವಿದ್ಯಾಮಾತಾ ಅಕಾಡೆಮಿ ಮೂಲಕ ಕಳೆದ 4 ವರ್ಷಗಳಿಂದ 64ಕ್ಕೂ ಅಧಿಕ ಅಭ್ಯರ್ಥಿಗಳು ಸೇನಾ ಪಡೆ/ ಅರೆಸೇನಾ ಪಡೆ / ಪೊಲೀಸ್ /ಅರಣ್ಯ ನೇಮಕಾತಿಗಳಿಗೆ ಆಯ್ಕೆಯಾಗಿ ಯಶಸ್ಸು ಕಂಡಿದ್ದಾರೆ.

ನೋಂದಣಿ ಮತ್ತು ಸಂಪರ್ಕ ಮಾಹಿತಿ:
ಅರ್ಜಿ ಸಲ್ಲಿಸಿರುವ, ಈಗಾಗಲೇ ಪರೀಕ್ಷೆ ಬರೆದಿರುವ ಅಥವಾ ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಪುತ್ತೂರಿನ ಎಪಿಎಂಸಿ (APMC) ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊಬೈಲ್ ಸಂಖ್ಯೆ: 9620468869 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading