ದುಗ್ಗಲಡ್ಕ : ಅನೆ ಹಾವಳಿ – ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಸಭೆ

ಕಳೆದೆರಡು ವಾರಗಳಿಂದ ಕಂದಡ್ಕ, ನೀರಬಿದಿರೆ ಕೊಯಿಕುಳಿ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟು ನಿರಂತರ ಕೃಷಿ ಹಾನಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಆ.10 ರಂದು ಅರಣ್ಯಾಧಿಕಾರಿಗಳ ತುರ್ತು ಸಭೆ ನಡೆಸಿದರು.

. . . . . . . . .

ಆನೆ ಹಾವಳಿ ವಿಸ್ತರಣೆ ಯಾಗುತ್ತಿರುವುದನ್ನು ತಡೆಯುವ ಕುರಿತು ಚರ್ಚಸಲಾಯಿತು. 6 ಆನೆಗಳಿದ್ದ ಹಿಂಡಿನಿಂದ ಮೂರು ಆನೆಗಳು ಕೊಯಿಕುಳಿ ಕಡೆಗೆ ಸಂಚರಿಸಿರುವುದರಿಂದ ಕೃಷಿ ಹಾನಿ ಹೆಚ್ಚಾಗುತ್ತಿದೆ. ಮರಿ ಆನೆಗಳು ಇರುವುದರಿಂದ ಕಂದಡ್ಕ ಹೊಳೆ ದಾಟಲು ಸಮಸ್ಯೆ ಆಗಿದೆ ಎನ್ನಲಾಗಿದೆ. ಆ. 12 ರಂದು ಸುಳ್ಯಕ್ಕೆ ಡಿಎಫ್ ಓ ಬೇಟಿ ನೀಡಿ ಮುಂದಿನ ಕಾರ್ಯಾಚರಣೆ ಬಗ್ಗೆ ಕೃಷಿಕರ ಜತೆ ಚರ್ಚಿಸಲಿದ್ದಾರೆ

. . . . . . .

ಈ ಸಭೆಯಲ್ಲಿ ಅರಣ್ಯಾಧಿಕಾರಿಗಳಾದ ಎನ್ ಮಂಜುನಾಥ್ ಹಾಗೂ ನಿರಂಜನ ಶೆಟ್ಟಿ, ಮುಖಂಡರುಗಳಾದ ಹರೀಶ್ ಕಂಜಿಪಿಲಿ, ವಿನಯ ಕುಮಾರ್ ಕಂದಡ್ಕ, ಕೇಶವ ಅಡ್ತಲೆ, ಜಗದೀಶ್ ಆರಂಬೂರು, ವೆಂಕಟ್ರಮಣ ಪೆತ್ತಾಜೆ, ಸುರೇಶ ಕಮಿಲ, ಅಶೋಕ್ ಕಲ್ಚರ್ಪೆ, ಬುದ್ಧ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading