ಡಾ| ನಿಶ್ಚಿತಾ ಕಿಶೋರ್ ಅರಂಪಾಡಿ ಅವರಿಗೆ “ಡಾ| ಬಿ.ಸಿ ರಾಯ್ ವೈದ್ಯ ಸೇವಾ ಸ್ಮಾರಕ ಗೌರವ ಪ್ರಶಸ್ತಿ” ಪ್ರದಾನ

ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಬೆಂಗಳೂರು ಇದರ ಹಾಸನ ಜಿಲ್ಲಾ ಶಾಖೆಯ ವತಿಯಿಂದ ಡಾ| ನಿಶ್ಚಿತಾ ಕಿಶೋ‌ರ್ ಅವರಿಗೆ ಆ.08 ರಂದು “ಡಾ| ಬಿ.ಸಿ ರಾಯ್ ವೈದ್ಯ ಸೇವಾ ಸ್ಮಾರಕ ಗೌರವ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು. ಸಕಲೇಶಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ physician ಆಗಿರುವ ಇವರು ಕಳೆದ 18 ವರ್ಷದಿಂದ ಸರ್ಕಾರಿ ವೈದ್ಯರಾಗಿ ಕರ್ತವ್ಯದಲ್ಲಿದ್ದಾರೆ.
ಒಂದು ವರ್ಷ ಕುಕ್ಕೆ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಗೂ 14 ವರ್ಷ ಸಕಲೇಶಪುರದ ಹೆತ್ತೂರಿನ ಪಿ.ಎಚ್. ಸಿ ಯಲ್ಲಿ ಕರ್ತವ್ಯ ಮಾಡಿದ್ದಾರೆ. ಬೆಂಗಳೂರಿನ ಬಿ.ಎಂ.ಸಿ ಕಾಲೇಜಿನಲ್ಲಿ ಎಂ.ಡಿ(General Medicine) ಯನ್ನು ಮುಗಿಸಿ ಪ್ರಸ್ತುತ 3 ವರುಷ ದಿಂದ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ. 18 ವರ್ಷಗಳ ಸರ್ಕಾರಿ ಸೇವಾ ಅವಧಿಯಲ್ಲಿ ಮಾಡಿದ ಸೇವೆ ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading