Ad Widget

ಸುಳ್ಯ : ಎಸ್‌ಡಿಪಿಐ ಕಾರ್ಯಕರ್ತರ ಸಭೆ – ಜಿಲ್ಲಾ ನಾಯಕರು ಭಾಗಿ


ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ವ್ಯಾಪ್ತಿಯ ನಾಯಕರ ಮತ್ತು ಕಾರ್ಯಕರ್ತರ ಸಭೆಯು ವಿಧಾನಸಭಾ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕೆನರ ರವರ ಅಧ್ಯಕ್ಷತೆಯಲ್ಲಿ ಸುಳ್ಯದಲ್ಲಿ ಜರುಗಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಪಕ್ಷವನ್ನು ಇನ್ನಷ್ಟು ತಲಮಟ್ಟದಲ್ಲಿ ಸಂಘಟಿಸುವ ಬಗ್ಗೆ ಹಾಗೂ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರ್ ರವರು ಪಕ್ಷ 14 ವರ್ಷ ಬಂದ ಹಾದಿ ಹಾಗೂ ಪಕ್ಷದ ಸಿದ್ದಂತಾಗಳ ಮತ್ತು ಸುಳ್ಯದಲ್ಲಿ ಪಕ್ಷದ ಕಾರ್ಯ ಚಟುವಟಿಕೆಗಳ ಯಾವ ರೀತಿ ಮುಂದುವರಸಬೇಕು ಮತ್ತು ಪಕ್ಷ ಸಂಘಟಿಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರು ಮಾತನಾಡಿ ದೇಶದಲ್ಲಿ 2800 ರಷ್ಟು ರಾಜಕೀಯ ಪಕ್ಷಗಳಿದ್ದರು ಜನರ ನೋವಿಗೆ ಸ್ಪಂದಿಸುವ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರ ಮೇಲೆ ಹೊಡೆತವನ್ನು ಕೊಟ್ಟು ಕಾರ್ಪುರೇಟ್ ಗಳಿಗಾಗಿ ಕೆಲಸ ಮಾಡುತ್ತಿರುವಾಗ ಹಾಗೂ ದೇಶದಲ್ಲಿ ಸರ್ಕಾರಗಳು ಸಂವಿದಾನ ವಿರುದ್ಧವಾಗಿ ನಡೆದುಕೊಂಡು ಹೋಗುವಾಗ ಅದರ ವಿರುದ್ಧ ಹೋರಾಟದ ಮೂಲಕ ಎಚ್ಚರಿಕೆಯನ್ನು ನೀಡುವುದು ಅದು ಎಸ್‌ಡಿಪಿಐ ಪಕ್ಷ ಮಾತ್ರ. ಹಸಿವು ಮುಕ್ತ ಮತ್ತು ಭಯ ಮುಕ್ತ ಘೋಷಣೆ ವಾಕ್ಯದ ಸಿದ್ಧಾಂತದ ಮೂಲಕ ದೇಶದ 20 ರಾಜ್ಯಗಳಲ್ಲಿ ಈ ಪಕ್ಷ ಕಾರ್ಯಾಚರಿಸುವುದರ ಮೂಲಕ ಹೊಸ ಪರ್ಯಾಯ ರಾಜಕೀಯ ಶಕ್ತಿಯಾಗಿ ಕಾರ್ಯಾಚರಿಸುತ್ತಾ ಇದೆ. ಅದೇ ರೀತಿ ಸುಳ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳಸಿ ಜನರ ನೋವಿಗೆ ಸ್ಪಂದಿಸಿ ಹೋರಾಟದ ಮೂಲಕ ಅಧಿಕಾರಿಗಳನ್ನ ಎಚ್ಚರಿಸುತ್ತಲೆ ಇರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾದ ಅಬ್ದುಲ್ ರಹ್ಮಾನ್ ತಂಬಿನಮಕ್ಕಿ,ಅಬ್ದುರಹ್ಮಾನ್ ಅಡ್ಕಾರ್, ಸೆಲೀಮ್ ಗೂನಡ್ಕ ಸೇರಿದಂತೆ ಹಲವು ಸ್ಥಳೀಯ ನಾಯಕರು ಉಪಸ್ಥಿತರಿದ್ದರು. ಮೀರಜ್ ಸುಳ್ಯ ಸ್ವಾಗತಿಸಿ,ಅಬ್ದುಲ್ ರಜಾಕ್ ಪೈಚಾರ್ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!