Ad Widget

ಮಂಡೆಕೋಲು : ಗ್ರಾ. ಪಂ. ಸದಸ್ಯ ದಿನೇಶ್ ಅಕ್ಕಪ್ಪಾಡಿ ವಿಧಿವಶ

ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಅಕ್ಕಪ್ಪಾಡಿ ಎಂಬುವವರು ವಿಧಿವಶರಾಗಿದ್ದಾರೆ.ಅವರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಡ್ಪಂಗಾಯ : ಅಯ್ಯಪ್ಪ ಮಂದಿರದಲ್ಲಿ ದುರ್ಗಾ ಪೂಜೆ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಧನು ಸಂಕ್ರಮಣದ ಪ್ರಯುಕ್ತ ವಿಶೇಷ ದುರ್ಗಾಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ) ಸನ್ನಿಧಾನ ಅಡ್ಪಂಗಾಯ ಇದರ ವತಿಯಿಂದ ಧನು ಸಂಕ್ರಮಣದ ಪ್ರಯುಕ್ತ ವಿಶೇಷ ದುರ್ಗಾಪೂಜಾ ಕಾರ್ಯಕ್ರಮ ಹಾಗೂ ಅಯ್ಯಪ್ಪ ಸ್ವಾಮಿಗೆ ಸಂಕ್ರಮಣ ಪೂಜೆಯು ಡಿ 17ನೇ ಆದಿತ್ಯವಾರದಂದು ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ನೆರೆವೇರಿತು....
Ad Widget

ಎಸ್.ಸಿ. ಸಮುದಾಯದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ಎಸ್.ಸಿ. ಪ್ರಮಾಣ ಪತ್ರ ನೀಡಲು ಆದೇಶ

ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿಯವರೆಂದು ಪರಿಗಣಿಸಿ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಕೇಂದ್ರ ಸರ್ಕಾರವು ಪತ್ರದಲ್ಲಿ ನಮೂದಿಸಿರುವ ಷರತ್ತುಗಳಿಗೊಳಪಟ್ಟು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲು ರಾಜ್ಯ ಸರಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಬೌದ್ಧ ಸಂಘಟನೆಯ...

ಕುಮಾರ ಪರ್ವತ ಚಾರಣಿಗರ ನೆಚ್ಚಿನ ಗಿರಿಗದ್ದೆ ಭಟ್ರು ಇನ್ನಿಲ್ಲ

ಕುಮಾರ ಪರ್ವತ ಚಾರಣ ಮಾಡುವ ದಾರಿ ಮಧ್ಯೆ ಗಿರಿಗದ್ದೆ ಎಂಬಲ್ಲಿ ನೆಲೆಸಿದ್ದ ಮಹಾಲಿಂಗ ಭಟ್ಟರು ಸಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು . ಅವರಿಗೆ 67 ವರ್ಷ ವಯಸ್ಸಾಗಿತ್ತು. ಸುಬ್ರಹ್ಮಣ್ಯದಿಂದ 4 ಕಿಮೀ ದೂರದಲ್ಲಿ ದಾರಿ ಮಧ್ಯೆ ಸಿಗುವ ಮನೆಯೇ ಗಿರಿಗದ್ದೆ ಮಹಾಲಿಂಗ ಭಟ್ಟರದು. ಪ್ರವಾಸಿಗರಿಗೆ ಇಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ...

ರುಡ್ ಸೆಟ್ ವತಿಯಿಂದ ಜೇನು ಸಾಕಾಣಿಕೆ ಬಗ್ಗೆ ಉಚಿತ ತರಬೇತಿ

ಧರ್ಮಸ್ಥಳದ ಸಮೀಪ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ 10 ದಿನಗಳ ಕಾಲ ಜೇನು ಸಾಕಾಣಿಕೆ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮ ಜ. 08 ರಿಂದ ಜ. 17 ರವರೆಗೆ ನಡೆಯಲಿದೆ.ವಯೋಮಿತಿ 18 ರಿಂದ 45 ವರ್ಷಗಳು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು....

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡಾ.ಕೇನಾಜೆ ನಿರ್ದೇಶನದ “ಪುರ್ಸ ಕಟ್ಟುನೆ” ಸಾಕ್ಷ್ಯಚಿತ್ರ ಆಯ್ಕೆ

2024ರ ಜನವರಿ 5 ರಿಂದ 9ರ ವರೆಗೆ ಕೇರಳದ ತ್ರಿಶೂರಿನಲ್ಲಿ ನಡೆಯುವ 7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಡಾ.ಸುಂದರ ಕೇನಾಜೆ ಚಿತ್ರಕತೆ ಬರೆದು ನಿರ್ದೇಶನ ಮಾಡಿ ಇತ್ತೀಚಿಗೆ ಬಿಡುಗಡೆಗೊಳಿಸಿದ ತುಳು ಸಾಕ್ಷ್ಯಚಿತ್ರ "ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ" ಆಯ್ಕೆಯಾಗಿದೆ.ತುಳು ವಿಕಿಪೀಡಿಯ ಫೌಂಡೇಶನ್ ತಯಾರಿಸಿದ ಈ ಸಾಕ್ಷ್ಯಚಿತ್ರದ ನಿರ್ಮಾಣವನ್ನು ಸುಳ್ಯದವರೇ ಆದ ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ...
error: Content is protected !!