Ad Widget

ನಾಪೊಕ್ಲು‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮನು ಪೆರುಮುಂಡ ಆಯ್ಕೆ

ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮನು ಪೆರುಮುಂಡ ನೇಮಕಗೊಂಡಿದ್ದಾರೆ. ಪೆರಾಜೆ ವಲಯದ ಪುತ್ಯ ಪೆರಾಜೆ ಬೂತ್ ಮಟ್ಟದ ಸಭೆ ಡಿ.10ರಂದು ನಡೆಯಿತು.ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಕೆ .ಎ, ಮುಖಂಡರಾದ ಟಿ .ಪಿ ರಮೇಶ ಮಡಿಕೇರಿ,ಬೇಕಲ್ ರಮಾನಾಥ್ ಕರಿಕೆ, ಶೌಕತ್ ಅಲಿ ಕುಂಜಿಲ, ರಾಜೇಶ್ವರಿ ಕೊಯಿನಾಡು, ಚುನಾವಣಾ ಉಸ್ತುವಾರಿ ರಮೇಶ್ ಎ .ಪಿ ಬಾಳಲೆ,...

ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ.

ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿ ಬಾಬು ನಾಯ್ಕರವರ ಪುತ್ರ ಸತೀಶ್ ರವರು ಮನೆಯ ಪಕ್ಕದ ಗುಡ್ಡದಲ್ಲಿ ಮರಕ್ಕೆ ನೇಣುಬಿಗಿದು ಡಿ.10 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
Ad Widget

ಗುತ್ತಿಗಾರು : ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಸ್ಪರ್ಧಾ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮ- ನಾಲ್ವರು ವಿಶೇಷ ಚೇತನ ಸಾಧಕರಿಗೆ “ದಿವ್ಯಾಂಗ ಸಾಧಕ ಪ್ರಶಸ್ತಿ”

(ವರದಿ : ಉಲ್ಲಾಸ್ ಕಜ್ಜೋಡಿ)ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ ಸುಳ್ಯ, ಗುತ್ತಿಗಾರು ಗ್ರಾಮ ಪಂಚಾಯತ್, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ,...

ಕರ್ಲಪ್ಪಾಡಿ‌ ಜಾತ್ರೆ ಪ್ರಯುಕ್ತ ಶ್ರೀ‌ವಿಷ್ಣು ಯುವಕ ಮಂಡಲದಿಂದ ಶ್ರಮದಾನ

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಕ್ಷೇತ್ರದ ಜಾತ್ರೋತ್ಸವದ ಪೂರ್ವ ತಯಾರಿಯಾಗಿ ಶ್ರೀ ವಿಷ್ಣು ಯುವಕ ಮಂಡಲ ಮೇನಾಲ ವತಿಯಿಂದ ಶ್ರಮದಾನ ಸೇವೆ ನಡೆಯಿತು. ಈ ಶ್ರಮದಾನ ಸೇವೆಯಲ್ಲಿ ವಿಷ್ಣು ಯುವಕ ಮಂಡಲದ ಅಧ್ಯಕ್ಷ ರಂಜಿತ್ ರೈ ಮೇನಾಲ,ಗೌರವ ಅಧ್ಯಕ್ಷ ಶ್ರೀಧರ ಮನಣಿಯಾನಿ ಮೇನಾಲ,ಪ್ರಧಾನ ಕಾರ್ಯದರ್ಶಿ ಮೋಹನ್ ಮೂಲ್ಯಯುವಕ ಮಂಡಲದ ಪದಾಧಿಕಾರಿಗಳಾದ ಶರಣ್ಯ ರಾವ್ ತುದಿಯಡ್ಕ, ಉಮೇಶ್ ಇರಂತಮಜಲು,...

ಡಿ.12 : ವಳಲಂಬೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಡಿ.12 ರಂದು ಸಂಜೆ ಗಂಟೆ 6.30 ರಿಂದ ಚಿನ್ನಮ್ಮ ವಳಲಂಬೆ ಮತ್ತು ಮಕ್ಕಳ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವಾರೂಪದಲ್ಲಿ ಪ್ರದರ್ಶನಗೊಳ್ಳಲಿದೆ.

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.17 ರಿಂದ ಧನುಪೂಜೆ ಆರಂಭ

(ವರದಿ : ಉಲ್ಲಾಸ್ ಕಜ್ಜೋಡಿ)ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ 17-12-2023ನೇ ಆದಿತ್ಯವಾರದಿಂದ 14-01-2024ನೇ ಆದಿತ್ಯವಾರದ ತನಕ ಪ್ರತಿದಿನ ಪ್ರಾತಃಕಾಲ 05:30 ಕ್ಕೆ ಧನುಪೂಜೆ ನಡೆಯಲಿದ್ದು, 14-01-2024ನೇ ಆದಿತ್ಯವಾರದಂದು ಮಕರಸಂಕ್ರಮಣ, ಬೆಳಿಗ್ಗೆ 4:00 ಗಂಟೆಯಿಂದ ಉಧ್ಯಾಪನಾ ಧನುಪೂಜೆ, ಮದ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಹಾಗೂ ವನಭೋಜನ ನಡೆಯಲಿದೆ.
error: Content is protected !!