ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2020-21ನೇ ಸಾಲಿನ ದ್ವಿತೀಯ ಹಂತದ ಮತ್ತು 2021-22ನೇ ಸಾಲಿನ ಪ್ರಥಮ ಹಂತದ ಹಾಗೂ 2020-21ನೇ ಸಾಲಿನ 14&15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯು ಫೆ.07 ರ ಸೋಮವಾರದಂದು ಕೊಲ್ಲಮೊಗ್ರು ಗ್ರಾಮಪಂಚಾಯತ್ ನ ಸಭಾಭವನದಲ್ಲಿ ನಡೆಯಿತು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ ಅವರು ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದರು.
ತಾಲೂಕು ಸಂಯೋಜಕರಾದ ಚಂದ್ರಶೇಖರ ಅವರು ಸಾಮಾಜಿಕ ಪರಿಶೋಧನಾ ವರದಿ ಸಿದ್ಧಪಡಿಸಿದರು.
ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ.ಎ, ಗ್ರಾಮಪಂಚಾಯತ್ ಅದ್ಯಕ್ಷ ಉದಯ ಕೊಪ್ಪಡ್ಕ ಹಾಗೂ ಉಪಾಧ್ಯಕ್ಷೆ ಜಯಶ್ರೀ ಚಾಂತಾಳ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಮೋಹಿನಿ ಕಟ್ಟ, ಶ್ರೀಮತಿ ಶುಭಲತಾ ಕಟ್ಟ, ಪುಷ್ಪರಾಜ್ ಪಡ್ಪು, ತೋಟಗಾರಿಕಾ ವಿಭಾಗದ ತಾಲೂಕು ಸಂಯೋಜಕರಾದ ಕು.ನಿಶಾ, ತಾಲೂಕು IEC ಸಂಯೋಜಕರಾದ ಕು.ನಮಿತಾ, ಉದ್ಯೋಗ ಖಾತರಿ ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ವೇಣುಗೋಪಾಲ್, ಸಂಧ್ಯಾ.ಬಿ, ಮೈತ್ರಿ.ಎಚ್, ರೇಷ್ಮಾ.ಐ ಹಾಗೂ 14/15 ನೇ ಹಣಕಾಸು ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಸವಿತಾ.ಎಂ, ಕಾವ್ಯ.ಕೆ.ಜೆ , ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಮೋಹನ್ ಕೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ ಗಡಿಕಲ್ಲು, ಲೀಲಾವತಿ ಬಿ ಶಿರೂರು, ನವ್ಯ ನಡುಗಲ್ಲು, ವಸಂತ ಕೆ ಕೊರಂಬಟ, ಮಮತಾ ಮರಕತ, ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯರಾದ ವಿಮಲಾಕ್ಷಿ ಗೋಳ್ಯಾಡಿ, ಲೀಲಾವತಿ ತಂಬಿನಡ್ಕ, ಸುನಂದ ಗಡಿಕಲ್ಲು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ