Ad Widget

ಸಂಪತ್ ಕೊಲೆ ಪ್ರಕರಣ : ಕೋವಿ,ಕಾರು ನೀಡಿದವರಿಗೂ ನ್ಯಾಯಾಂಗ ಬಂಧನ

ಕಳಗಿ ಬಾಲಚಂದ್ರರ ಹತ್ಯೆ ಆರೋಪಿ ಸಂಪತ್ ಕುಮಾರ್ ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಕೊಲೆ ಆರೋಪಿಗಳಿಗೆ ಕೋವಿ ಕೊಟ್ಟ ಇಬ್ಬರು ಹಾಗೂ ಕಾರು ಕೊಟ್ಟ ಒಬ್ಬರನ್ನು ಬಂಧಿಸಿದ ಪೋಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆ ಮೂವರಿಗೂ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ.

. . . . . . . . .

ಸಂಪತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಲ್ಲುಗುಂಡಿಯ ಮನು, ಬಿಪಿನ್, ಕಾರ್ತಿಕ್, ಮನೋಜ್, ಅಡ್ಕಾರಿನ ಶಿಶಿರ್ ರನ್ನು ಪೋಲೀಸರು ಬಂಧಿಸಿದ್ದರು. ಅವರಲ್ಲಿ ಶಿಶಿರ್ ಒಬ್ಬನಿಗೆ ನಿನ್ನೆ ನ್ಯಾಯಾಂಗ ಬಂಧನ ವಾಗಿತ್ತು. ಉಳಿದ ನಾಲ್ಕು ಮಂದಿಯನ್ನು ವಿಚಾರಣೆಗಾಗಿ ಪೋಲೀಸ್ ಕಸ್ಟಡಿಗೆ ನೀಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

. . . . . . .

ಕೊಲೆ ಆರೋಪಿಗಳಿಗೆ ಕೋವಿ ನೀಡಿದ ಆರೋಪದಲ್ಲಿ ಸಂಪಾಜೆಯ ರವೀಂದ್ರ, ಮಡಿಕೇರಿಯ ಡಿಂಪಲ್, ಮತ್ತು ಕಾರು ಕೊಟ್ಟ ರಾಜೇಶ್ ರನ್ನು ವಶಕ್ಕೆ ಪಡೆದ ಪೋಲೀಸರು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮೂವರನ್ನು ಅ.23 ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading