ದೇವ ಶಿಕ್ಷೆಯಿಂದ ಪಾರಾಗಲು ಜನಸೇವೆ ವ್ಯಾಪಕ ಗೊಳಿಸುವಂತೆ ಜಿಲ್ಲಾ ಎಸ್ ವೈ ಎಸ್ ಕರೆ


ಜಿಲ್ಲಾ ಎಸ್ ವೈ ಎಸ್ (ಸುನ್ನಿ ಯುವ ಜನ ಸಂಘ)ಕಾರ್ಯಕರ್ತರ ಸಮಾವೇಶ ಸುಳ್ಯ ಗಾಂಧಿನಗರ ಸುನ್ನೀ ಮಹಲ್ ಕಛೇರಿಯಲ್ಲಿ ಅ 11 ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ವಾಂಸರಾದ ಎಸ್ ಬಿ ಮುಹಮ್ಮದ್ ದಾರಿಮಿ ಇಂದು ನಾವು ಬಲಿಷ್ಠ ಸಂಘ ಶಕ್ತಿ ಯಾಗುವುದರ ಅನಿವಾರ್ಯತೆ ಯನ್ನು ವಿವರಿಸಿ ಸಮಸ್ಯೆ, ಸವಾಲುಗಳನ್ನು ಎದುರಿಸಲು ಒಗ್ಗಟ್ಟು ಪ್ರಮುಖ ಅಂಶವೆಂದು ಅಭಿಪ್ರಾಯ ಪಟ್ಟರು.
ಇಡೀ ಮುಸ್ಲಿಂ ಸಮಾಜಕ್ಕೆ ಅನ್ವಯಿಸುವ ಸಮಸ್ತದ ಕಾರ್ಯಚಟುವಟಿಕೆಗಳು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದು ಸಮಾಜವನ್ನು ಎಲ್ಲಾ ಕ್ಷೇತ್ರದಲ್ಲೂ ಬಲಿಷ್ಡ ಗೊಳಿಸುವುದೇ ಅದರ ಗುರಿ ಎನ್ನುತ್ತಾ ಸಮಸ್ತದೊಂದಿಗೆ ಎಲ್ಲರೂ ಕೈ ಜೋಡಿಸಲು ಮನವಿ ಮಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಮೌಲಾನ ಯು ಕೆ ದಾರಿಮಿ ಮಾತನಾಡಿ ಜನರ ಅಕ್ರಮ ಅನ್ಯಾಯದ ಫಲವಾಗಿ ದೇವಶಿಕ್ಷೆಯು ಜಗತ್ತಿನಾದ್ಯಂತ ಪ್ರಸರಿಸುತ್ತಿದೆ.ವಿವಿಧ ರೀತಿಯ ರೋಗ ರುಜಿನಗಳು ಮತ್ತು ದುರಂತಗಳ ಸರಮಾಲೆಗಳೇ ಸಂಭವಿಸುತ್ತಿದ್ದು ಇದನ್ನು ಅತಿಜಯಿಸಲು ಜನಸೇವೆಯ ಮೂಲಕ ದೇವ ಸಾಮೀಪ್ಯ ಗಳಿಸುವುದೊಂದೇ ದಾರಿ ಎಂದರು.
ಜಿಲ್ಲಾ ನಾಯಕರಾದ ತಬೂಕು ದಾರಿಮಿ,ರಫೀಖ್ ಹಾಜಿ ಕೊಡಾಜೆ, ತಾಜ್ ಮುಹಮ್ಮದ್ ಸಂಪಾಜೆ ,ಕರಾವಳಿ ಹಮೀದ್ ಉಪ್ಪಿನಂಗಡಿ ಕಾರ್ಯಕ್ರಮ ಕ್ಕೆ ಶುಭ ಕೋರಿ ಮಾತಾಡಿದರು.
ಸಂಘಟನೆಯ ನೇತಾರರಾದ ಹಕೀಮ್ ಪರ್ತಿಪ್ಪಾಡಿ,ಎಸ್ ಕೆ ಹಮೀದ್ ಹಾಜಿ,ಅಕ್ಬರ್ ಮುಸ್ಲಿಯಾರ್ ಅರಂಬೂರು,ರಫೀಕ್ ಮುಸ್ಲಿಯಾರ್ ಅಜ್ಜಾವರ,ಅಹ್ಮದ್ ಮದನಿ,ಹಸೈನಾರ್ ದರ್ಮತನ್ನಿ,ಝೈನುದ್ದೀನ್ ಮುಸ್ಲಿಯಾರ್ ಅಜ್ಜಾವರ,ಅಹ್ಮದ್ ಹಾಜಿ ಪಾರ,ಟಿ ಎಚ್ ಮುಹಮ್ಮದ್ ಕುಞಿ,ಸುಪ್ರಿಂ ಅಹ್ಮದ್ ಹಾಜಿ,ಅಶ್ರಪ್ ಅರಂತೋಡು,ಕೆ ಎಚ್ ಅಬ್ದುಲ್ ರಝಾಕ್,ಮೂಸಾ ಅರಂತೋಡು,ಅಬ್ದುಲ್ಲ ಕನಕಮಜಲ್,ಕೆ ಸಿ ಹಸೈನಾರ್ ಕನಕಮಜಲ್,ಎ ಎಂ ಅಬೂಬಕರ್ ಹಾಜಿ ಅಜ್ಜಾವರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ
ಎಸ್ ವೈ ಎಸ್ ಜಿಲ್ಲಾ ಸಮಿತಿ ವತಿಯಿಂದ ಸಂಗ್ರಹಿಸಿದ್ದ ಬಡ ಕುಟುಂಬದ ಅನಾಥ ಹೆಣ್ಣು ಮಗಳ ಮದುವೆಗೆ ಸಹಾಯ ಧನವನ್ನು ಸುಳ್ಯ ಎಸ್ ವೈ ಎಸ್ ಅದ್ಯಕ್ಷ ಕತ್ತರ್ ಹಾಜಿಯವರಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಕೆಎಲ್ ಉಮರ್ ದಾರಿಮಿ ಶಾಖೆಗಳನ್ನು ರಚಿಸುವುದರ ಕುರಿತು ಸಮಗ್ರ ಮಾಹಿತಿ ನೀಡಿದರು.ಶಾಫಿ ದಾರಿಮಿ ಅಜ್ಜಾವರ ಸ್ವಾಗತಿಸಿದರು. ರಝಾಕ್ ಮುಸ್ಲಿಯಾರ್ ಅಜ್ಜಾವರ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading