ಸುಳ್ಯದಲ್ಲಿ ಯಶಸ್ವಿ ಯಾಗಿ ನಡೆದ ಪ್ಲಾಸ್ಮ ರಕ್ತದ ಮಾದರಿ ಸಂಗ್ರಹ ಶಿಬಿರ

ಸುಳ್ಯ :ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿ ನಗರ,ಸುಳ್ಯ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ದೇರಳಕಟ್ಟೆ,ಮಂಗಳೂರು ಇದರ ಸಹಭಾಗಿತ್ವದಲ್ಲಿ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರ ಸುಳ್ಯದ ಗಾಂಧಿ ನಗರದಲ್ಲಿರುವ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನಡೆಯಿತು.

. . . . . . . . .

COVID – 19 ಸಂಕಷ್ಟದ ಸಮಯದಲ್ಲಿ ಕೋರೋನಾ ಭಾದಿತ ರೋಗಿಗೆ ಜೀವ ಉಳಿಸುವ ಪ್ರಯತ್ನದ ಸಲುವಾಗಿ ಚಿಕಿತ್ಸೆಯ ಕೊನೇಯ ಅಸ್ತ್ರವಾಗಿ ಅತ್ಯಾವಶ್ಯಕವಾಗಿರುವ ಪ್ಲಾಸ್ಮಾ ವನ್ನು ದಾನ ಮಾಡಲು ಅನುಕೂಲವಾಗುವ
ಸಲುವಾಗಿ ಸಂಸ್ಥೆಯು ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬ್ಲಡ್ ಹೆಲ್ಪ್ ಲೈನ್ ಸಂಘಟಕರು ಈ ಸಂದರ್ಭದಲ್ಲಿ ತಿಳಿಸಿದರು

. . . . . . .

ಶಿಬಿರದಲ್ಲಿ ಸುಮಾರು 88 ಪ್ಲಾಸ್ಮ ದಾನಿಗಳು ಪಾಲ್ಗೊಂಡಿದ್ದು 66 ಪ್ಲಾಸ್ಮ ದಾನಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿದೆ.

ದಾನಿಗಳಿಂದ ರಕ್ತದ ಮಾದರಿ ಸಂಗ್ರಹಿಸುವಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು

ಕಾರ್ಯಕ್ರಮದ ಯಶಸ್ವಿಗೆ ಸಮೀರ್ ಮೊಬೈಲ್ ಹಾರ್ಟ್ ,ಫೈಝಲ್ ಕಟ್ಟೆಕಾರ್ ,ಬಸೀರ್ ನ್ಯಾಷನಲ್ ,ತಾಜುದ್ದೀನ್ ಜನಪ್ರಿಯ ಹಾಗು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸುಳ್ಯ ಘಟಕದ ನಿರ್ವಾಹಕರಾದ ರಫೀಕ್ ,ರಹೀಮ್ ಪ್ಯಾನ್ಸಿ ಮತ್ತು ಬ್ಲಡ್ ಹೆಲ್ಪ್ ಲೈನ್ ನಿರ್ವಾಹಕರಾದ ಸಾಬಿತ್ ಕುಂಬ್ರ ,ಇನ್ಝಾಮಾಮ್ ಕಲಾಯಿ ,ನೌಶಾದ್ ಮಂಚಿ ರವರು ಸಹಕರಿಸಿದರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading