ಗುತ್ತಿಗಾರು: ರಿಕ್ಷಾದಲ್ಲಿ ಅಕ್ರಮ ಮರ ಸಾಗಾಟ | ರಿಕ್ಷಾ ಸಹಿತ ಆರೋಪಿಗಳು ವಶಕ್ಕೆ 

ತಾಲೂಕಿನ ಗುತ್ತಿಗಾರು ಗ್ರಾಮದ ಮೊಟ್ಟೆಮನೆ- ಹೊಸೊಳಿಕೆ  ಎಂಬಲ್ಲಿ ಅಕ್ರಮವಾಗಿ ಸರ್ಕಾರಿ ಸ್ಥಳದಿಂದ ಕಿರಾಲ್‌ಭೋಗಿ ಹಾಗು ಹೆಬ್ಬಲಸು ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲು ಯತ್ನಿಸಿರುವ ಪ್ರಕರಣ ದಿನಾಂಕ 07/10/2020 ರಂದು ದಾಖಲಾಗಿದೆ.

. . . . . . . . .


. . . . . . .


ಪ್ರಕರಣವನ್ನು ಪಂಜ ವಲಯದ ಬಳ್ಪ ಶಾಖೆಯ ಸಿಬ್ಬಂದಿಗಳು ಪತ್ತೆ ಹಚ್ಚಿ ತಕ್ಷೀರು ದಾಖಲಿಸಿರುತ್ತಾರೆ. ಪ್ರಕರಣದಲ್ಲಿ ಒಳಗೊಂಡಿರುವ ಆಟೋರಿಕ್ಷಾ ನೊಂದಣಿ ಸಂಖ್ಯೆ ಕೆಎ21ಬಿ 1052 , ಮರ ಕಡಿಯುವ ಯಂತ್ರ ಹಾಗು ಹಗ್ಗ ಇವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುತ್ತಾರೆ.

ಇಬ್ಬರು ಆರೋಪಿಗಳಾದ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಕೆಯ್ಯಾರು ಮನೆ ನಿವಾಸಿ ಇಬ್ರಾಹಿಂ ಕೆ ಹಾಗೂ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಅಂಚೆ ಸಾರಪುಣಿ ಮನೆ ನಿವಾಸಿ ದಿ. ಮುತ್ತಬ್ಬ ಬ್ಯಾರಿ ಎಂಬವರ ಮಗ ಇಬ್ರಾಹಿಂ ಕೆ ಇವರನ್ನು ದಸ್ತಗಿರಿ ಮಾಡಲಾಗಿದೆ . ಪ್ರಕರಣದ ಪ್ರಮುಖ ಆರೋಪಿಯಾದ ನಾಸೀರ್ ಕುಂಬ್ರ , ರಿಕ್ಷಾ ಚಾಲಕ ಸಂಶುದ್ದೀನ್ ಹಾಗು ಸ್ಥಳದ ವಾರೀಸುದಾರರಿಗಾಗಿ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿರುವ ಟಾಟಾ ಸುಮೋ ವಾಹನದ ಶೋಧ ಕಾರ್ಯ ಮುಂದುವರೆದಿದೆ.

ಒಟ್ಟು ಕಿರಾಲ್‌ಭೋಗಿ ಹಾಗು ಹೆಬ್ಬಲಸು ಜಾತಿಯ 08 ದಿಮ್ಮಿಗಳ 1.219 ಘ.ಮೀ. ಮೋಪನ್ನು ಆರೋಪಿಗಳಿಂದ ವಶ ಪಡಿಸಿಕೊಳ್ಳಲಾಗಿದೆ . ವಾಹನ ಹಾಗು ಸೊತ್ತುಗಳ ಮೌಲ್ಯ ಅಂದಾಜು ರೂ 1,50,000 ಗಳಾಗಿರುತ್ತದೆ . ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್‌ರವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಆಸ್ಟೀನ್ ಓ ಸೋನ್ಸ್ ರವರ ನಿರ್ದೇಶನದಲ್ಲಿ ಪಂಜ ವಲಯ ಅರಣ್ಯ ಅಧಿಕಾರಿಯಾದ ಶ್ರೀ ಮಂಜುನಾಥ್ ಎನ್ ಇವರು ತನಿಖೆ ಕೈಗೊಂಡಿರುತ್ತಾರೆ. ಸದ್ರಿ ಕಾರ್ಯಾಚರಣೆಯಲ್ಲಿ ಬಳ್ಳ ಶಾಖಾ ಉಪ ವಲಯ ಅರಣ್ಯ ಅಧಿಕಾರಿ ರವಿಪ್ರಕಾಶ್ , ಗುತ್ತಿಗಾರು ಗಸ್ತಿನ ಅರಣ್ಯ ರಕ್ಷಕ ಶ್ರೀ ಸಂತೋಷ್ ಎಸ್ ಧಮ್ಮಸೂರ ಹಾಗೂ ಅರಣ್ಯ ವೀಕ್ಷಕರಾದ ಶ್ರೀ ದಿನೇಶ್ ಕುಮಾರ್ ,  ಗಣೇಶ್ ಹೆಗ್ಡೆ ಹಾಗೂ  ವೆಂಕಟ್ರಮಣ ಕೆ ಇವರು ಭಾಗವಹಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading